ಸುಂಟಿಕೊಪ್ಪ, ಸೆ. 15: ಸುಂಟಿಕೊಪ್ಪ ಏಳನೇಹೊಸಕೋಟೆ ಗ್ರಾಮದ ಬಿ.ಎಸ್.ಬಾಸ್ಕರ ರೈ ಅವರ ಸಂಕಪ್ಪ ತೋಟಕ್ಕೆ ಮತ್ತು ಗದ್ದೆಗೆ ರಾತ್ರಿ ವೇಳೆ ಆನೆ ದಾಳಿ ನಡೆಸಿ ಪೈರುಗಳನ್ನು ತಿಂದು, ತುಳಿದು ನಷ್ಟ ಪಡಿಸಿದೆ.

ನಿರಂತರವಾಗಿ ಏಳನೇ ಹೊಸಕೋಟೆ ಸುತ್ತಮುತ್ತಲಿನ ತೋಟಗಳಲ್ಲಿ ರಾತ್ರಿ ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಈ ಭಾಗಗಳಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.