ಮಡಿಕೇರಿ, ಸೆ. 14: ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ವತಿಯಿಂದ 2020ರ ರಾಷ್ಟ್ರೀಯ ಹಿಂದಿ ದಿವಸ್‍ನ ಅಂಗವಾಗಿ ನಡೆದ ರಾಜ್ಯಮಟ್ಟದ ಸಮಾರಂಭದಲ್ಲಿ ಸರಕಾರಿ ಪ್ರೌಢಶಾಲೆ ಚೆಂಬುವಿನ ಹಿಂದಿ ಶಿಕ್ಷಕಿ ಪಿ.ಎಸ್. ಕಾಮಾಕ್ಷಿ ಅವರಿಗೆ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಇವರು ಹಿರಿಯ ರಾಜಕಾರಣಿ ಸುಬ್ರಮಣ್ಯ ಉಪಾಧ್ಯಾಯ ಅವರ ಪತ್ನಿ.