ಗುಡ್ಡೆಹೊಸೂರು, ಸೆ. 11 : ಶಾಲಾ ಮಕ್ಕಳ ಬೆಳವಣಿಗೆಗೆ ಪೌಷ್ಟಿಕಾಂಶಯುಕ್ತ ಆಹಾರದ ಅಗತ್ಯವಿದೆ ಎಂದು ಗುಡ್ಡೆಹೊಸೂರು ಗ್ರಾ. ಪಂ.ಅಭಿವೃದ್ದಿ ಅಧಿಕಾರಿ ಶ್ಯಾಂ ಹೇಳಿದರು. ಇಲ್ಲಿಗೆ ಸಮೀಪದ ಬಸವನಹಳ್ಳಿಯ ಪ್ರೌಢಶಾಲೆಯಲ್ಲಿ ಗುಡ್ಡೆಹೊಸೂರು ಗ್ರಾ.ಪಂ ಹಾಗೂ ಶಾಲೆಯ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಶಾಲೆಯ ವಿಜಾÐನ ಶಿಕ್ಷಕ ವೆಂಕಟೇಶ್, ಶ್ರೀನಿವಾಸ ಬಿ. ನಾಯಕ್, ಜಯಶ್ರೀ, ಸುವರ್ಣ, ವೀಣಾ, ವಿಜಯಲಕ್ಷ್ಮಿ ಗ್ರಾ. ಪಂ. ನೌಕರ ವಿಜಯ್ ಮತ್ತು ಪೌರ ಕಾರ್ಮಿಕರು ಹಾಜರಿದ್ದರು.