ವೀರಾಜಪೇಟೆ ಸೆ. 10: ವೀರಾಜಪೇಟೆಯ ಐತಿಹಾಸಿಕ ಗೌರಿ ಗಣೇಶದ 21 ಉತ್ಸವ ಸಮಿತಿಗಳಿಂದ ಇಲ್ಲಿನಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರನ ನಂದಿ ವಿಗ್ರಹ ಮೂರ್ತಿಗೆ ಮಹಾಪೂಜಾ ಸೇವೆ ಸಲ್ಲಿಸಿ ಶಾಂತಿ ಪೂಜೆ ನೆರವೇರಿಸಲಾಯಿತು.

ಪೂಜೆಯ ನಂತರ ನಡೆದ ಸಭೆಯಲ್ಲಿ ಮುಂದಿನ ವರ್ಷದ ಗೌರಿ ಗಣೇಶೋತ್ಸವವನ್ನು ಈ ಹಿಂದಿನ ವರ್ಷಗಳಂತೆ ಅದ್ಧೂರಿಯಿಂದ ಆಚರಿಸುವಂತೆ ಉತ್ಸವ ಸಮಿತಿಗಳು ತೀರ್ಮಾನಿಸಿತು. ಈ ಬಾರಿಯ ಉತ್ಸವ ಸಮಿತಿಗಳು ಎಲ್ಲ ಉತ್ಸವ ಸಮಿತಿಗಳೊಂದಿಗೆ ಪರಸ್ಪರ ಸಹಕರಿಸಿದನ್ನು ಸಭೆಯಲ್ಲಿ ಸ್ಮರಿಸಲಾಯಿತು.

ಸಭೆಯು ವೀರರಾಜೇಂದ್ರಪೇಟೆ ಐತಿಹಾಸಿಕ ನಾಡಹಬ್ಬ ಸಮಿತಿಯ ಅಧ್ಯಕ್ಷ ಬಿ.ಜಿ.ಸಾಯಿನಾಥ್, ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯ ಎನ್.ಜಿ.ಕಾಮತ್, ಕಾವೇರಿ ಉತ್ಸವ ಸಮಿತಿಯ ಟಿ.ಪಿ.ಕೃಷ್ಣ, ಅಂಜಪರವಂಡ ಅನಿಲ್ ಮಂದಣ್ಣ ಇತರ ಪ್ರಮುಖರು ಸೇರಿದಂತೆ ಉತ್ಸವ ಸಮಿತಿಯ ಎಲ್ಲ ಪ್ರತಿನಿಧಿಗಳು ಭಾಗವಹಿಸಿದ್ದರು.