ಸೋಮವಾರಪೇಟೆ,ಸೆ.11: ಕಳೆದ ಎರಡು ದಿನದ ಹಿಂದೆ ಸುರಿದ ಭಾರೀ ಮಳೆಗೆ ಕಾನ್ವೆಂಟ್ ಶಾಲೆಯ ಬಳಿಯಲ್ಲಿರುವ ವಾಸದ ಮನೆಯ ಹಿಂಭಾಗದ ತಡೆಗೋಡೆ ಕುಸಿಯುವ ಹಂತಕ್ಕೆ ತಲುಪಿದ್ದು, ಮನೆಗೆ ಹಾನಿಯಾಗುವ ಆತಂಕ ಎದುರಾಗಿದೆ.
ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯ ಓಎಲ್ವಿ ಕಾನ್ವೆಂಟ್ ರಸ್ತೆ ನಿವಾಸಿ ಬಿ.ಎಸ್. ಸದಾನಂದ್ ಅವರ ಮನೆಯ ಹಿಂಭಾಗ ನಿರ್ಮಿಸಿದ್ದ ತಡೆಗೋಡೆ, ಕಳೆದೆರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಶೇ.50ರಷ್ಟು ಕುಸಿದಿದ್ದು, ಸದಾನಂದ್ ಅವರ ವಾಸದ ಮನೆಗೆ ಹಾನಿಯಾಗುವ ಆತಂಕದ ಸನ್ನಿವೇಶ ಸೃಷ್ಟಿಯಾಗಿದೆ.
ತಾ. 8ರಂದು ಮಧ್ಯಾಹ್ನ ಕೇವಲ 1 ಗಂಟೆಯ ಅವಧಿಯಲ್ಲಿ 3 ಇಂಚು ಮಳೆಯಾದ ಹಿನ್ನೆಲೆ ಪ್ರವಾಹದಂತೆ ನೀರು ಹರಿದಿದ್ದು, ರೂ. 6 ಲಕ್ಷ ವೆಚ್ಚದಲ್ಲಿ ನಿರ್ಮಿಸ ಲಾಗಿದ್ದ ತಡೆಗೋಡೆ ಯು ಬಿರುಕು ಬಿಟ್ಟಿದೆ.
ಮುಂದಿನ ದಿನಗಳಲ್ಲಿ ಮಳೆ ಯಾದರೆ ಇಡೀ ತಡೆಗೋಡೆ ಮನೆಯ ಮೇಲೆ ಬಿದ್ದು, ಮನೆಯೊಂದಿಗೆ ಜೀವ ಹಾನಿಯಾಗುವ ಆತಂಕವೂ ಎದುರಾಗಿದ್ದು, ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಅಪ್ಪಚ್ಚು ರಂಜನ್, ತಹಶೀಲ್ದಾರ್ ಗೋವಿಂದರಾಜು ಅವರಿಗೆ ಸದಾನಂದ್ ಅವರು ಮನವಿ ಸಲ್ಲಿಸಿದ್ದಾರೆ.