ವೀರಾಜಪೇಟೆ, ಸೆ. 10: ವೀರಾಜಪೇಟೆಯ ಮೀನುಪೇಟೆಯಲ್ಲಿರುವ ಮುತ್ತಪ್ಪನ್ ಓಣಂ ಉತ್ಸವ ಆಚರಣಾ ಸಮಿತಿಯಿಂದ ತಾ. 20 ರಂದು ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಇ.ಸಿ. ಜೀವನ್ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೀವನ್, ಉತ್ಸವ ಸಮಿತಿ ಸದಸ್ಯರುಗಳನ್ನೊಳಗೊಂಡಂತೆ ತಾ. 20 ರಂದು ಅಪರಾಹ್ನ 3 ಗಂಟೆಗೆ ಮುತ್ತಪ್ಪನ್ ಕಲಾ ಮಂಟಪದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು 2019-20ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಲೆಯಾಳಿ ಬಾಂಧವರಿಗೆ ಸೀಮಿತಗೊಂಡಂತೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಅದೇ ರೀತಿ ಲಾಕ್‍ಡೌನ್ ಸಮಯದಲ್ಲಿ ಆನ್‍ಲೈನ್ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಗುವುದು ಎಂದರು.

ಸಮಿತಿಯ ಉಪಾಧ್ಯಕ್ಷ ಪದ್ಮನಾಭನ್ ಮಾತನಾಡಿ, ವೀರಾಜಪೇಟೆ ಪಟ್ಟಣ ಹಾಗೂ ಗ್ರಾಮಾಂತರದಲ್ಲಿ 10 ಕಿ.ಮೀ. ಅಂತರದಲ್ಲಿರುವ ಮಲೆಯಾಳಿ ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತಾ. 17 ರೊಳಗೆ ಸಿ.ಆರ್. ಸಜೀವನ್ ಮೊ. 9448721118, ಸಿ.ಆರ್. ಬಾಬು ಮೊ. 9731258197 ಸಂಪರ್ಕಿಸಬಹುದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಕೋಶಾಧಿಕಾರಿ ಸಜೀವನ್, ಕಾರ್ಯದರ್ಶಿ ಸಿ.ಆರ್. ಬಾಬು ಹಾಗೂ ಸಹ ಕಾರ್ಯದರ್ಶಿ ಎಂ. ಸತೀಶ್ ಹಾಜರಿದ್ದರು.