ಭಾಗಮಂಡಲ, ಸೆ. 10: ಸಮೀಪದ ಕೋರಂಗಾಲ ಗ್ರಾಮದಲ್ಲಿ ಕಾವೇರಿ ನದಿಯಲ್ಲಿ ಅಂದಾಜು 40-45 ವರ್ಷ ವಯಸ್ಸಿನ ಪುರುಷರೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವನ್ನಪ್ಪಿ 5-6 ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ವ್ಯಕ್ತಿಯ ಶರೀರದ ಮೇಲೆ ಕಂದು ಬಣ್ಣದ ಪಂಚೆ, ಅರ್ಧ ತೋಳಿನ ಬನಿಯನ್ ಹಾಗೂ ಲಾಡಿ ಚಡ್ಡಿ ಗೋಚರಿಸಿದೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಹಿತಿಗೆ ಭಾಗಮಂಡಲ ಪೊಲೀಸ್ ಠಾಣೆಯನ್ನು ದೂ. 243270ರಲ್ಲಿ ಸಂಪರ್ಕಿಸುವಂತೆ ಠಾಣಾಧಿಕಾರಿ ಕೋರಿದ್ದಾರೆ.