ಮಡಿಕೇರಿ, ಸೆ. 10: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಂದು ಸಾವು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 26 ಕ್ಕೇರಿದೆ. ಮಡಿಕೇರಿ ನಗರದ ಗೌಡ ಸಮಾಜದ ಬಳಿಯ ನಿವಾಸಿ 90 ವರ್ಷದ ಪುರುಷರೊಬ್ಬರು, ಈ ಹಿಂದಿನಿಂದಲೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ತಾ. 1 ರಂದು ಖಾಸಗಿ ಆಸ್ಪತ್ರೆಯಿಂದಲೇ ಅವರ ಗಂಟಲು, ಮೂಗು ದ್ರವ ಮಾದರಿಯನ್ನು ತೆಗೆದು ಕೋವಿಡ್ ಪರೀಕ್ಷೆಯನ್ನು ಮಾಡಿಸಲಾಗಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ತಕ್ಷಣವೇ ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಐ.ಸಿ.ಯು ನಲ್ಲಿ ಚಿಕಿತ್ಸೆ ಮುಂದುವರೆಸಿದ್ದು, ತಾ.10 ರಂದು ಬೆಳಿಗ್ಗೆ 9.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ 62 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 1888 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1531 ಮಂದಿ ಗುಣಮುಖರಾಗಿದ್ದಾರೆ. 331 ಸಕ್ರಿಯ ಪ್ರಕರಣಗಳಿವೆÉ. ಸೋಂಕಿತರ ಪೈಕಿ 114 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 54 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹಾಗೂ 163 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ 335 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ವೀರಾಜಪೇಟೆ ತೆಲುಗರ ಬೀದಿಯ 50 ವರ್ಷದ ಪುರುಷ, ಮಡಿಕೇರಿ ಪ್ರಕೃತಿ ಬಡಾವಣೆಯ ಕಾವೇರಿ ಹಾಲ್ ಸಮೀಪದ 60 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಮುತ್ತಪ್ಪ ದೇವಾಲಯ ಸಮೀಪದ 30 ವರ್ಷದ ಪುರುಷ, ಕುಶಾಲನಗರ ಬಸವೇಶ್ವರ ಬಡಾವಣೆಯ ಇಂಜಿನಿಯರಿಂಗ್ ಹಾಸ್ಟೆಲ್ ಸಮೀಪದ 41 ವರ್ಷದ ಪುರುಷ ಮತ್ತು 3 ವರ್ಷದ ಮಹಿಳೆ, ಗೋಣಿಕೊಪ್ಪ ಪಿ.ಎನ್.ಎಂ ಆಸ್ಪತ್ರೆಯ ಹಿಂಭಾಗದ 34 ವರ್ಷದ ಮಹಿಳೆ, ಕಾನೂರು ಕೋತೂರುವಿನ ಅಯ್ಯಪ್ಪ ದೇವಾಲಯ ಬಳಿಯ 34 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ, ಗೋಣಿಕೊಪ್ಪ ಕೈಕೇರಿ ಗ್ರಾಮ ಮತ್ತು ಅಂಚೆಯ ನಂದವನ ಜಂಕ್ಷನ್ನಿನ 56 ವರ್ಷದ ಮಹಿಳೆ, ಪೆÇನ್ನಂಪೇಟೆಯ ಪಶು ಚಿಕಿತ್ಸಾಲಯ ಸಮೀಪದ 75 ವರ್ಷದ ಮಹಿಳೆ, ಗೋಣಿಕೊಪ್ಪ ಎಚ್.ಸಿ ಪುರದ ಎಂ.ಆರ್.ಎಫ್ ಟೈರ್ ಕಾರ್ಖಾನೆ ಬಳಿಯ 29 ವರ್ಷದ ಮಹಿಳೆ, ಮಕ್ಕಂದೂರು ಗ್ರಾಮದ ತಂತಿಪಾಲದ ಮಹಿಳೆ, ಸೋಮವಾರಪೇಟೆ ಹುಂಜಿಗನಹಳ್ಳಿ ಮುನೀಶ್ವರ ದೇವಾಲಯ ಬಳಿಯ 62 ವರ್ಷದ ಪುರುಷ, ಹಾಸನದ ಕೊಣನೂರುವಿನ 22 ವರ್ಷದ ಪುರುಷ, ಮಡಿಕೇರಿ ಪೆನ್‍ಷನ್ ಲೈನಿನ ಸಹಕಾರ ಸಂಘ ಕಟ್ಟಡ ಹಿಂಭಾಗದ 79 ವರ್ಷದ ಮಹಿಳೆ, ಮಡಿಕೇರಿ ಗುಂಡೂರಾವ್ ಬಡಾವಣೆಯ 68 ವರ್ಷದ ಪುರುಷ, ಬೋಯಿಕೇರಿಯ ಇಬ್ನಿವಳವಾಡಿಯ 60 ವರ್ಷದ ಪುರುಷ, 82 ವರ್ಷದ ಮಹಿಳೆ ಮತ್ತು 21 ವರ್ಷದ ಪುರುಷ, ವೀರಾಜಪೇಟೆ ಕೋತೂರುವಿನ ಮಾರಮ್ಮ ದೇವಾಲಯ ಬಳಿಯ 48,45,30 ವರ್ಷದ ಪುರುಷರು, 27 ಮತ್ತು 18 ವರ್ಷದ ಮಹಿಳೆಯರು, ಸೋಮವಾರಪೇಟೆ ಕೊಡ್ಲಿಪೇಟೆಯ ಚೌಡೇಶ್ವರಿ ದೇವಾಲಯ ಸಮೀಪದ 56 ವರ್ಷದ ಪುರುಷ, ಸೋಮವಾರಪೇಟೆ ಗೆಜ್ಜೆಹನಕೋಡ್ಲು ಗ್ರಾಮದ 77 ವರ್ಷದ ಪುರುಷ, ಮಡಿಕೇರಿ ಚೈನ್ ಗೇಟ್ ಬಳಿಯ ವಸತಿಗೃಹದ 34 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ ಅವಮ್ಮ ಕಾಂಪ್ಲೆಕ್ಸ್ ಎದುರಿನ 52 ವರ್ಷದ ಪುರುಷ, ವೀರಾಜಪೇಟೆ ಗಾಂಧಿನಗರದ ಪೆÇಲೀಸ್ ವಸತಿಗೃಹದ 39 ವರ್ಷದ ಪುರುಷ, ಬೋಯಿಕೇರಿ ಅಂಚೆಯ ಅಂಗನವಾಡಿ ಬಳಿಯ 24 ವÀರ್ಷದ ಪುರುಷ, ಮೂರ್ನಾಡು ರಸ್ತೆಯ 46 ವರ್ಷದ ಮಹಿಳೆ, ಬೋಯಿಕೇರಿ ಗ್ರಾಮ ಮತ್ತು ಅಂಚೆಯ ದೇವಾಲಯ ಸಮೀಪದ 50 ವರ್ಷದ ಮಹಿಳೆ, ವೀರಾಜಪೇಟೆ ಸುಭಾಷ್ ನಗ?ದ 37 ವರ್ಷದ ಮಹಿಳೆ, 15 ವರ್ಷದ ಬಾಲಕಿ ಮತ್ತು 11 ವರ್ಷದ ಬಾಲಕ, ವೀರಾಜಪೇಟೆ ಪಂಜರಪೇಟೆಯ ಸರ್ವೋದಯ ಕಾಲೇಜು ಸಮೀಪದ 44 ವರ್ಷದ ಪುರುಷ, ವೀರಾಜಪೇಟೆ ಮಹಿಳಾ ಸಮಾಜ ಹಿಂಭಾಗದ 54, 25 ವರ್ಷದ ಮಹಿಳೆಯರು ಮತ್ತು 22 ವರ್ಷದ ಪುರುಷ, ಸಿದ್ದಾಪುರ ಜಿಎಂಪಿ ಶಾಲೆ ಬಳಿಯ 31 ಮತ್ತು 28 ವರ್ಷದ ಮಹಿಳೆಯರು, ಗೋಣಿಕೊಪ್ಪ ಪಿ.ಎನ್.ಎಂ ಆಸ್ಪತ್ರೆ ಹಿಂಭಾಗದ 44 ಮತ್ತು 23 ವರ್ಷದ ಪುರುಷರು, ತಿತಿಮತಿಯ 47, 58, 41 ಮತ್ತು 42 ವರ್ಷದ ಪುರುಷರು, ವೀರಾಜಪೇಟೆ ಒಂಟಿ ಅಂಗಡಿಯ 27 ವರ್ಷದ ಪುರುಷ, ವೀರಾಜಪೇಟೆ ಕೋಣಕಟ್ಟೆ ಮಾರಿಯಮ್ಮ ದೇವಾಲಯ ಬಳಿಯ 50 ವರ್ಷದ ಪುರುಷ, ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದ 67 ವರ್ಷದ ಪುರುಷ, ಸೋಮವಾರಪೇಟೆ ನೆಲ್ಲಿಹುದಿಕೇರಿಯ ಪಂಚಾಯತಿ ಹಿಂಭಾಗದ 40 ವರ್ಷದ ಪುರುಷ, ವೀರಾಜಪೇಟೆ ಅರಸು ನಗರದ 28 ವರ್ಷದ ಪುರುಷ, ಪೆÇನ್ನಂಪೇಟೆಯ ಕುಂದ ರಸ್ತೆಯ 41 ವರ್ಷದ ಪುರುಷ, ಪೆÇನ್ನಂಪೇಟೆಯ ಕಟ್ರಕೊಲ್ಲಿಯ 58 ವರ್ಷದ ಮಹಿಳೆ, ಹುದಿಕೇರಿಯ ಆರೋಗ್ಯ ಕೇಂದ್ರ ಬಳಿಯ 52 ವರ್ಷದ ಮಹಿಳೆ, ವೀರಾಜಪೇಟೆ ಬೆಳ್ಳೂರು ಗ್ರಾಮದ ಎಸ್ಟೇಟ್ ಬಳಿಯ 22 ವರ್ಷದ ಮಹಿಳೆ, ಮಡಿಕೇರಿ ಮಂಗಳಾದೇವಿ ನಗರದ ಎಪಿಎಂಸಿ ಸಮೀಪದ 60 ವರ್ಷದ ಪುರುಷ, 52, 86 ವರ್ಷದ ಮಹಿಳೆಯರು, 26 ವರ್ಷದ ಪುರುಷ ಮತ್ತು 59 ವರ್ಷದ ಮಹಿಳೆ. ಮೂರ್ನಾಡು ಕೊಡಂಬೂರು ಜೂನಿಯರ್ ಕಾಲೇಜು ಬಳಿಯ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.