ಮಡಿಕೇರಿ, ಸೆ. 11: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ತಾ. 15ರÀಂದು ಬೆಳಿಗ್ಗೆ 11.30 ಗಂಟೆಗೆ ಚೆಟ್ಟಳ್ಳಿ ಪಂಚಾಯಿತಿ ಕಚೇರಿಯ ಸಭಾಂಗಣ ದಲ್ಲಿ ನೋಡೆಲ್ ಅಧಿಕಾರಿ ಸಂಜೀವ್ ಕುಮಾರ್ ಆರ್. ಸಿಂಧೆ ಅವರ ಅಧ್ಯಕ್ಷತೆಯಲ್ಲಿ ಹಾಗೂ ಆಡಳಿತಾಧಿಕಾರಿ ಜಯಣ್ಣ. ಬಿ.ವಿ., ಜಿಲ್ಲಾ ಸಂಯೋಜಕರು ಸಾಮಾಜಿಕ ಪರಿಶೋಧನೆ ಎನ್.ಜಿ. ಪ್ರೀತಮ್ ಪೊನ್ನಪ್ಪ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.