ಸೋಮವಾರಪೇಟೆ, ಸೆ. 10: ಕೃಷಿ ಇಲಾಖೆಯಲ್ಲಿ 37 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ಅವರನ್ನು ಪಟ್ಟಣದ ಕೃಷಿ ಇಲಾಖೆಯ ಸಿಬ್ಬಂದಿಗಳು ಸನ್ಮಾನಿಸಿ, ಬೀಳ್ಕೊಟ್ಟರು.

ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದ ರಾಜಶೇಖರ್ ಅವರು ಕೂಡಿಗೆ ಮಣ್ಣು ಆರೋಗ್ಯ ಕೇಂದ್ರದಲ್ಲಿ 17 ವರ್ಷ, ಸಹಾಯಕ ಕೃಷಿ ಅಧಿಕಾರಿಯಾಗಿ ಉಡುಪಿಯಲ್ಲಿ 2 ವರ್ಷ, ಅರಕಲಗೂಡುವಿನಲ್ಲಿ 2 ವರ್ಷ, ಕೃಷಿ ಅಧಿಕಾರಿಯಾಗಿ ಕುಶಾಲನಗರದಲ್ಲಿ 8 ವರ್ಷ ಹಾಗೂ ಸಹಾಯಕ ನಿರ್ದೇಶಕರಾಗಿ ಸೋಮವಾರಪೇಟೆಯಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಕಾರ್ಯಕ್ರಮಗಳ ಅನುಷ್ಠಾನ, ಕೃಷಿ ಪರಿಕರಗಳ ವಿತರಣೆ, ತಾಂತ್ರಿಕ ಮಾಹಿತಿ ನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರ ಹಿನ್ನೆಲೆ ಕೃಷಿಕರಿಂದ ಪ್ರಶಂಸೆಗೆ ಭಾಜನರಾಗಿದ್ದಾರೆ ಎಂದು ತಾಂತ್ರಿಕ ಅಧಿಕಾರಿ ಮುಕುಂದ ಹೇಳಿದರು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರುಗಳಾದ ಗೌರಿ, ಹಿರೇಮಠ್, ಮೇಲ್ವಿಚಾರಕ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.