ಮಡಿಕೇರಿ, ಸೆ. 11 : ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಡಿಕೇರಿ ಇಲ್ಲಿನ ಸಮನ್ವಯ ಶಿಕ್ಷಣಕ್ಕೆ ಒಳಪಡುವ ವಿಶೇಷ ಅಗತ್ಯತೆಯುಳ್ಳ ಮಕ್ಕಳಾದ ಸರ್ಕಾರಿ ಪ್ರೌಢಶಾಲೆ ಹಾಕತ್ತೂರುವಿನ 8ನೇ ತರಗತಿ ವಿದ್ಯಾರ್ಥಿನಿ ರಾಹಿಲ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಪೆರಾಜೆ ವಿದ್ಯಾರ್ಥಿ ಜೀವನ್ ಎಂ.ಎ. ಇವರಿಗೆ ಶುಕ್ರವಾರ ನಗರದ ಬಿಆರ್‍ಸಿ ಕೇಂದ್ರದಲ್ಲಿ ಅನಂದೂರು ಶೇಷಯ್ಯ ಲಕ್ಷ್ಮೀದೇವಮ್ಮ ಮತ್ತು ಕಾಶ್ಯಪ್ ಅಸೋಸಿಯೇಟ್ಸ್” ದತ್ತಿ ನಿಧಿಯಿಂದ ವಿದ್ಯಾರ್ಥಿಗಳಿಗೆ ಗಾಲಿ ಕುರ್ಚಿ ನೀಡಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯಿತ್ರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಬಿಆರ್‍ಪಿ, ಬಿಐಇಆರ್‍ಟಿ, ಶಿಕ್ಷಣ ಸಂಯೋಜಕರು, ಸಿಆರ್‍ಪಿ ಮಡಿಕೇರಿ ತಾಲೂಕು ರಾಮಚಂದ್ರ ಕೆ.ಎ ಇತರರು ಈ ಸಂದರ್ಭ ಇದ್ದರು. ಅಲ್ಲದೆ ದಾನಿಗಳಿಗೆ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದೆ ಎಂದು ಮಡಿಕೇರಿ ತಾಲೂಕು ಸಮಗ್ರ ಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ತಿಳಿಸಿದ್ದಾರೆ.