ಮಡಿಕೇರಿ, ಸೆ. 10 : ಪ್ರಸಕ್ತ ಸನ್ನಿವೇಶದಲ್ಲಿನ ಕೊರೊನಾ ಕಾರಣದಿಂದಾಗಿ ಹಲವಾರು ಚಟುವಟಿಕೆಗಳು ನೀರಸವಾಗಿರುವಂತೆ ಕೊಡಗು ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಸ್ಥಿತಿಯೂ ತುಸು ಮಂದಗತಿಯಲ್ಲಿ ಕಂಡುಬರುತ್ತಿದೆ.ಸ್ಥಳೀಯ ಸರಕಾರ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳ ಆಡಳಿತಾವಧಿ ಸದ್ದಿಲ್ಲದೆ ಪೂರ್ಣಗೊಂಡಿದ್ದು, ಎಲ್ಲರೂ ತಮ್ಮ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲಾಗದೆ ಮಾಜಿಗಳಾಗಿದ್ದಾರೆ. ಇನ್ನು ತಾಲೂಕು ಪಂಚಾಯತ್ ಗರಿಗೆದರಿದ ರಾಜಕೀಯ ನಡೆಗಳು ಕಂಡುಬರುತ್ತಿಲ್ಲವಾದರೂ ಪ್ರಮುಖ ಪಕ್ಷಗಳಾಗಿರುವ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಪಕ್ಷದ ಆಂತರಿಕವಾದ ಚಟುವಟಿಕೆಗಳು... ಪ್ರಯತ್ನಗಳು ಭವಿಷ್ಯದ ರಾಜಕೀಯದ ಚಿಂತನೆಯ ಮಡಿಕೇರಿ, ಸೆ. 10 : ಪ್ರಸಕ್ತ ಸನ್ನಿವೇಶದಲ್ಲಿನ ಕೊರೊನಾ ಕಾರಣದಿಂದಾಗಿ ಹಲವಾರು ಚಟುವಟಿಕೆಗಳು ನೀರಸವಾಗಿರುವಂತೆ ಕೊಡಗು ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಸ್ಥಿತಿಯೂ ತುಸು ಮಂದಗತಿಯಲ್ಲಿ ಕಂಡುಬರುತ್ತಿದೆ.ಸ್ಥಳೀಯ ಸರಕಾರ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳ ಆಡಳಿತಾವಧಿ ಸದ್ದಿಲ್ಲದೆ ಪೂರ್ಣಗೊಂಡಿದ್ದು, ಎಲ್ಲರೂ ತಮ್ಮ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲಾಗದೆ ಮಾಜಿಗಳಾಗಿದ್ದಾರೆ. ಇನ್ನು ತಾಲೂಕು ಪಂಚಾಯತ್ ಗರಿಗೆದರಿದ ರಾಜಕೀಯ ನಡೆಗಳು ಕಂಡುಬರುತ್ತಿಲ್ಲವಾದರೂ ಪ್ರಮುಖ ಪಕ್ಷಗಳಾಗಿರುವ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಪಕ್ಷದ ಆಂತರಿಕವಾದ ಚಟುವಟಿಕೆಗಳು... ಪ್ರಯತ್ನಗಳು ಭವಿಷ್ಯದ ರಾಜಕೀಯದ ಚಿಂತನೆಯ (ಮೊದಲ ಪುಟದಿಂದ) ಚುನಾವಣೆಯನ್ನು ಕಾಣದೆ ಇಲ್ಲಿ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಗಳಾಗಿದ್ದಾರೆ. ಈಗಷ್ಟೆ ನೂತನ ಆಯುಕ್ತರ ನೇಮಕವಾಗಿದೆ. ವೀರಾಜಪೇಟೆ-ಸೋಮವಾರಪೇಟೆ, ಕುಶಾಲನಗರ ಪಟ್ಟಣ ಪಂಚಾಯಿತಿಗಳಿಗೆ ವರ್ಷಗಳ ಹಿಂದೆಯೇ ಚುನಾವಣೆ ನಡೆದು ಸದಸ್ಯರು ಚುನಾಯಿತರಾಗಿದ್ದರೂ ಅಧ್ಯಕ್ಷ-ಉಪಾಧ್ಯಕ್ಷರ ನೇಮಕವಾಗದೆ ಇಲ್ಲಿಯೂ ಜನಪ್ರತಿನಿಧಿಗಳ ಆಡಳಿತ ನಿಂತ ನೀರಾಗಿದೆ.

ಇವು ಸ್ಥಳೀಯ ಸಂಸ್ಥೆಗಳ ಪರಿಸ್ಥಿತಿಯಾಗಿದ್ದರೆ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಕಥೆ ತುಸು ಭಿನ್ನವಾಗಿದೆ. ಕೆ.ಎಂ. ಗಣೇಶ್ ಅವರ ನೇತೃತ್ವದಲ್ಲಿ ಒಂದಷ್ಟು ಕೆಲಸಗಳ ಮೂಲಕ ತುಸು ಹೆಚ್ಚಿನ ಪ್ರಚಾರದಲ್ಲಿದೆ ಎನ್ನಬಹುದು.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ನೇಮಕಗೊಂಡ ಬಳಿಕ ಆರಂಭದಲ್ಲಿ ಕಂಡುಬಂದ ಬಿರುಸು ಈಗ ಗೋಚರಿಸುತ್ತಿಲ್ಲ. ಆದರೆ ಮುಂದಿನ ವಿಧಾನಸಭಾ ಚುನಾವಣೆಯ ಪ್ರಯತ್ನವೋ, ಜನಪರವಾದ ಕಾಳಜಿಯೋ ಎಂಬಂತೆ ಕೆಲವರು ಜಿಲ್ಲೆಯ ವಿವಿಧೆಡೆ ಬಿರುಸಿನ ಒಡನಾಟದಲ್ಲಿದ್ದಾರೆ. ಪರಿಹಾರ ಕಿಟ್ ವಿತರಣೆ, ಆರ್ಥಿಕ ಸಹಾಯಗಳು ಕಂಡುಬರುತ್ತಿವೆ. ಕದ್ದಣಿಯಂಡ ಹರೀಶ್ ಬೋಪಣ್ಣ, ಎ.ಎಸ್. ಪೊನ್ನಣ್ಣ, ನಾಪಂಡ ಮುತ್ತಪ್ಪ ಅವರುಗಳ ಓಡಾಟ ಹೆಚ್ಚಾಗಿ ಕಂಡುಬರುತ್ತಿದೆ. ಇವರೆಲ್ಲರೊಂದಿಗೆ ಇವರ ಬೆಂಬಲಿಗರೂ ಕ್ರಿಯಾಶೀಲರಾಗಿದ್ದಾರೆ.

ಇನ್ನು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದಲ್ಲಿ ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆಗಳು ಕಾಣದಿದ್ದರೂ ಪಕ್ಷದ ವಿವಿಧ ಘಟಕಗಳ ನೇಮಕಾತಿಯ ಕಸರತ್ತಿನ ಬಿಸಿ ಹವೆ ಇದೆ.

ಮಡಿಕೇರಿ ಮೂಡಾದಲ್ಲಿ ಅಧ್ಯಕ್ಷ ಸ್ಥಾನದ ಪೈಪೋಟಿ ಹಲಸಮಯದಿಂದ ನಡೆದಿದ್ದು ಇದೀಗ ರಮೇಶ್ ಹೊಳ್ಳ ನೇಮಕಗೊಂಡಿದ್ದಾರೆ. ಕುಶಾಲನಗರ ಕುಡಾ ಅಧ್ಯಕ್ಷರಾಗಿ ಎಂ.ಎಂ. ಚರಣ್ ನೇಮಕಗೊಂಡಿದ್ದರೆ ಬಿಜೆಪಿಯ ವಿವಿಧ ಘಟಕಗಳಿಗೆ ಅಧ್ಯಕ್ಷರ ಹೆಸರು ಘೋಷಣೆಯಾಗಿದ್ದರೂ ಪೂರ್ಣಪ್ರಮಾಣದ ಸಮಿತಿ ಇನ್ನೂ ರಚನೆಯಾಗಿಲ್ಲ. ಇದರಲ್ಲಿಯೂ ಮಹಿಳಾ ಮೋರ್ಚಾ ಹಾಗೂ ಯುವ ಮೋರ್ಚಾದ ನೇಮಕಾತಿ ವಿಚಾರದಲ್ಲಿ ಕೆಲ ಭಿನ್ನಾಭಿಪ್ರಾಯಗಳಿವೆ ಎನ್ನಲಾಗುತ್ತಿದ್ದು, ಇದು ಇತ್ತೀಚೆಗೆ ಜಿಲ್ಲೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಗಮಿಸಿದ್ದಾಗ ಚರ್ಚೆಗೆ ಬಂದಿದೆ ಎಂಬ ಮಾತು ಕೇಳಿಬಂದಿದೆ. ಇತರ ಮೋರ್ಚಾಗಳಲ್ಲಿ ಗೊಂದಲ ಇಲ್ಲವಾದರೂ ಸಮಿತಿ ಪದಾಧಿಕಾರಿಗಳ ನೇಮಕಾತಿ ವಿಳಂಬವಾಗಿದೆ.

ಸದ್ಯದಲ್ಲಿ ಗ್ರಾ.ಪಂ. ಚುನಾವಣೆ ಎದುರಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಪಕ್ಷಗಳಿಗೂ ಇದು ತಳಮಟ್ಟದ ವೇದಿಕೆಯಾಗಲಿರುವುದರಿಂದ ಸಮತೋಲನದ ಎಚ್ಚರಿಕೆಯ ರಾಜಕೀಯ ಹೆಜ್ಜೆ ಇಡುವ ಕಸರತ್ತು ಬಹುಶಃ ಎಲ್ಲಾ ಪಕ್ಷಗಳಲ್ಲೂ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯಿಸುತ್ತಿದ್ದಾರೆ. ಇದಾದ ಬಳಿಕ ತಾ.ಪಂ., ಜಿ.ಪಂ. ಚುನಾವಣೆ ಬರಲಿದ್ದು, ಮುಂದಿನ ವಿಧಾನಸಭಾ ಚುನಾವಣೆಯ ದೂರಾಲೋಚನೆಯೂ ಇರುವ ಸಾಧ್ಯತೆ ಇದೆ.