ಕೂಡಿಗೆ, ಸೆ. 11: ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆಯಿಂದ ನಿವೃತ್ತಿ ಹೊಂದಿದ ಡಾ. ಹೆಚ್.ಎಸ್. ರಾಜಶೇಖ ಅವರಿಗೆ ಕೊಡಗು-ಹಾಸನ ಸಾವಯವ ಕೃಷಿ ಒಕ್ಕೂಟದ ವತಿಯಿಂದ ಗೌರವಿಸಿ ಬೀಳ್ಕೊಡುಗೆ ನೀಡಲಾಯಿತು. ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಪ್ರಸಾದ್ ಪಾಳೇಕೆರೆ, ಉಪಾಧ್ಯಕ್ಷ ಎನ್.ಕೆ. ಮುತ್ತಪ್ಪ, ನಿರ್ದೇಶಕರುಗಳಾದ ಕಪಿನಪ್ಪ, ಸದಾಡೇನಿಸ್ ಅಪ್ಪಾಜಿ, ಧರ್ಮಲಿಂಗಂ, ಕೃಷ್ಣಮೂರ್ತಿ, ಬಸವರಾಜು, ನಂಜುಂಡೇಗೌಡ ಸೇರಿದಂತೆ ಸಿಬ್ಬಂದಿ ವರ್ಗಹಾಜರಿದ್ದರು.