ಸಿದ್ದಾಪುರ, ಸೆ. 9: ಕೊಡಗು ಜಿಲ್ಲಾ ಸುನ್ನಿ ಫೆಡರೇಶನ್ (ಎಸ್.ಎಸ್.ಎಫ್) ಸಂಘಟನೆ ವತಿಯಿಂದ ಬ್ಲಡ್ ಸೈಬೋ ಘಟಕ ಹಾಗೂ ಕೊಡಗು ಮೆಡಿಕಲ್ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.

ನೆಲ್ಲಿಹುದಿಕೇರಿಯ ದಾರುನ್ನಜಾತ್ ಎಜುಕೇಶನ್ ಸೆಂಟರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಸ್ವಯಂ ಸೇವಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಸ್.ಎಫ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಜೀಜ್ ಸಖಾಫಿ ಎಸ್.ಎಸ್.ಎಫ್. ಸಂಘಟನೆಯು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಹಿಂದೆ ಪ್ರವಾಹ ಪೀಡಿತ ಸಂತ್ರಸ್ತರರಿಗೆ ನೆರವು ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಜಿಲ್ಲಾ ಕಾರ್ಯದರ್ಶಿ ಮುಸ್ತಫ, ಜಿಲ್ಲಾ ಉಪಾಧ್ಯಕ್ಷ ಸಾಫಿ ಸಹದಿ, ವೀರಾಜಪೇಟೆ ವಿಭಾಗದ ಅಧ್ಯಕ್ಷ ಜುಬೈರ್ ಸಹದಿ, ವೈದ್ಯಾಧಿಕಾರಿ ಡಾ. ಕರುಂಬಯ್ಯ, ಪೊಲೀಸ್ ಸಿಬ್ಬಂದಿ ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.