ಕರಿಕೆ, ಸೆ. 8: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಮಿತಿಯ ಸೂಚನೆಯಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಶಕ್ತಿ ಕೇಂದ್ರಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಸಮಿತಿ ಅಧ್ಯಕ್ಷ ಹೊಸಮನೆ ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿ ಗ್ರಾಮ ಸಮಿತಿಯನ್ನು ಬದಲಾವಣೆ ಮಾಡಿ ಶಕ್ತಿ ಕೇಂದ್ರ ರಚಿಸಲಾಯಿತು. ಮುಂದಿನ ಗ್ರಾಮ ಪಂಚಾಯಿತಿ ಹಾಗೂ ಜಿ.ಪಂ., ತಾ.ಪಂ ಚುನಾವಣೆಯ ದೃಷ್ಟಿಯಿಂದ ಕಾರ್ಯಕರ್ತರ ಒಮ್ಮತದ ತೀರ್ಮಾನದಿಂದ ಹಳೆಯ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಹಾಗೂ ಕಾರ್ಯದರ್ಶಿ ವಿಜಯ ಅವರುಗಳನ್ನು ಶಕ್ತಿ ಕೇಂದ್ರದ ಪ್ರಮುಖ ಹಾಗೂ ಸಹ ಪ್ರಮುಖರಾಗಿ ಆಯ್ಕೆ ಮಾಡಲಾಯಿತು. ತಾಲೂಕು ಭಾಜಪ ಅಧ್ಯಕ್ಷ ಕಾಂಗೀರ ಸತೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೋಡಿರ ಪ್ರಸನ್ನ, ಪ್ರಮುಖರಾದ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಡೀನ್ ಬೋಪಣ್ಣ, ಆರ್.ಎಂಸಿ. ಅಧ್ಯಕ್ಷ ಬೆಪ್ಪುರನ ಮೇದಪ್ಪ, ಕಾಳನ ರವಿ, ಯುವ ಮೋರ್ಚಾ ಅಧ್ಯಕ್ಷ ಹೇಮಂತ್ ತೋರೆರ, ಕೋಡಿ ಪೊನ್ನಪ್ಪ, ಆರ್.ಎಂ.ಸಿ. ಸದಸ್ಯ ಕೆ.ಎ. ನಾರಾಯಣ, ಎಸ್.ಟಿ. ಮೋರ್ಚಾದ ಗಣೇಶ್, ಪಿ.ಟಿ. ಐಸಾಕ್ ಸೇರಿದಂತೆ ಇತರ ಪ್ರಮುಖರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.