ಸೋಮವಾರಪೇಟೆ, ಸೆ. 8: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನಿಲುವಾಗಿಲು ಗ್ರಾಮದಲ್ಲಿ ವಾಸದ ಸೋಮವಾರಪೇಟೆ, ಸೆ. 8: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನಿಲುವಾಗಿಲು ಗ್ರಾಮದಲ್ಲಿ ವಾಸದ ಉಪಠಾಣಾ ಸಿಬ್ಬಂದಿಗಳು, ಆರೋಪಿಯನ್ನು ಬಂಧಿಸಿದ್ದಾರೆ.ನಿಲುವಾಗಿಲು ಗ್ರಾಮದ ಭದ್ರಮ್ಮ ಎಂಬವರ ಮನೆಯಲ್ಲಿ ಕೆಲಸಕ್ಕಿರುವ ಶಾಂತರಾಜು ಬಂಧಿತ ಆರೋಪಿ. ಭದ್ರಮ್ಮ ಅವರ ಮನೆಯಲ್ಲಿ ಕಳೆದ ಕೆಲ ದಶಕಗಳಿಂದ ಕೆಲಸಕ್ಕಿರುವ ಆರೋಪಿ ಶಾಂತರಾಜು, ಮನೆಯ ಹಿಂಭಾಗ ಬುಟ್ಟಿಯಲ್ಲಿ 2 ಗಾಂಜಾ ಗಿಡಗಳು ಸೇರಿದಂತೆ ಬೇಲಿಯ ಪಕ್ಕದಲ್ಲಿ 8 ಗಿಡಗಳನ್ನು ಬೆಳೆಸಿದ್ದ.

ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಶನಿವಾರಸಂತೆಯ ಠಾಣಾಧಿಕಾರಿ ದೇವರಾಜ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಕೊಡ್ಲಿಪೇಟೆ ಉಪಠಾಣೆಯ ಮುಖ್ಯಪೇದೆ ಡಿಂಪಲ್, ಸಿಬ್ಬಂದಿ ಗಳಾದ ಧನಂಜಯ್, ಪಾಟೀಲ್ ಅವರುಗಳು, ಅಕ್ರಮವಾಗಿ ಬೆಳೆಯ ಲಾಗಿದ್ದ ಗಾಂಜಾ ಸಹಿತ ಆರೋಪಿ ಶಾಂತರಾಜುನನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ಹತ್ತು ಗಿಡಗಳಿಂದ 960 ಗ್ರಾಂ ಗಾಂಜಾವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, (ಮೊದಲ ಪುಟದಿಂದ) ಪೊಲೀಸ್ ಠಾಣಾಧಿಕಾರಿ ದೇವರಾಜು, ಸಿಬ್ಬಂದಿಗಳಾದ ಲೋಕೇಶ್, ಮುರುಳಿ, ವಿನಯ್, ಹರೀಶ್, ವಿವೇಕ್, ಡೆಪ್ಯೂಟಿ ತಹಶೀಲ್ದಾರ್ ಪುರುಷೋತ್ತಮ್, ಗ್ರಾಮಲೆಕ್ಕಿಗರಾದ ಶ್ರೀವಿದ್ಯಾ, ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ಇಲಾಖಾ ಅಧಿಕಾರಿಗಳ ಸಮಕ್ಷಮ ಸ್ಥಳ ಮಹಜರು ನಡೆಸಿ, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಭದ್ರಮ್ಮ ಅವರನ್ನು ಎರಡನೇ ಆರೋಪಿ ಎಂದು ಮಾಡಲಾಗಿದ್ದು, ಶಾಂತರಾಜುನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.