ಕುಶಾಲನಗರ, ಸೆ. 8: ಕುಶಾಲನಗರ ಗೌಡ ಯುವಕ ಸಂಘದ ಕಚೇರಿ ಆವರಣದಲ್ಲಿ ಸಂಘದ ಸದಸ್ಯರಿಂದ ನಾಟಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘದ ಗದ್ದೆಯಲ್ಲಿ ಸಂಘದ ಸದಸ್ಯರು ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹುತ್ತರಿ ಹಬ್ಬಕ್ಕೆ ಕದಿರು ತೆಗೆಯುವ ಸಲುವಾಗಿ ಈ ನಾಟಿ ಕಾರ್ಯ ನಡೆಸಲಾಯಿತು ಎಂದು ಸಂಘದ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ. ಈ ಸಂದರ್ಭ ಸಂಘದ ಕಾರ್ಯದರ್ಶಿ ಕುಲ್ಲಚ್ಚನ ಹೇಮಂತ್, ಗೌರವ ಅಧ್ಯಕ್ಷ ಪೆÇನ್ನಚ್ಚನ ಮೋಹನ್, ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್ ಮತ್ತು ಸಂಘದ ನಿರ್ದೇಶಕರು, ಸದಸ್ಯರು ಇದ್ದರು.