ಗುಡ್ಡೆಹೊಸೂರು, ಸೆ. 8: ಇಲ್ಲಿನ ಸುಣ್ಣದಕೆರೆ ಗ್ರಾಮದ ನಿವಾಸಿ ರಾಜೇಶ್ ಎಂಬುವವರು ಸುಮಾರು 2 ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆದಿದ್ದು ಈ ಬೆಳೆಯನ್ನು ಆನೆಗಳ ಗುಂಪು ರಾತ್ರಿ ಸಮಯದಲ್ಲಿ ದಾಳಿ ಮಾಡಿ ನಾಶಪಡಿಸಿವೆ. ಈ ವಿಭಾಗದಲ್ಲಿ ನಿರಂತರ ಆನೆ ಹಾವಳಿಯಿದ್ದು, ಬೆಳೆಗಳು ನಾಶವಾಗುತ್ತಿರುವುದಾಗಿ ರೈತರು ದೂರಿಕೊಂಡಿದ್ದಾರೆ. ರಾಜೇಶ್ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.