ಮಡಿಕೇರಿ, ಸೆ. 8: ಕರ್ನಾಟಕ-ಕೇರಳ ಅಂತರ್ರಾಜ್ಯ ಹೆದ್ದಾರಿ ಮಾರ್ಗದಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದು, ವೀರಾಜಪೇಟೆ ಪೊಲೀಸರಿಂದ ಬಂಧಿತರಾಗಿರುವ ಒಂಭತ್ತು ಆರೋಪಿಗಳ ಪೈಕಿ ಎಂಟು ಮಂದಿ ಇದೀಗ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರೊಂದಿಗೆ ಬಂಧಿತನಾಗಿದ್ದ ಮತ್ತೋರ್ವ ವ್ಯಕ್ತಿ ಕೊರೊನಾ ಸೋಂಕಿ ತನಾಗಿರುವುದರಿಂದ ಆತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ತಾ. 7 ರಂದು ಈ ತಂಡ ಮಾರ ಕಾಸ್ತ್ರಗಳು, ಖಾರದ ಪುಡಿಯಂತಹ ವಸ್ತುಗಳೊಂದಿಗೆ ವೀರಾಜಪೇಟೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.