ಕುಶಾಲನಗರ, ಸೆ. 7: ಕುಶಾಲನಗರ ಗೌಡ ಯುವಕ ಸಂಘದ ಆಶ್ರಯದಲ್ಲಿ ವನಮಹೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಮುಳ್ಳುಸೋಗೆಯಲ್ಲಿರುವ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪದಕ ವಿಜೇತ ಸೋಮವಾರಪೇಟೆ ಉಪವಿಭಾಗದ ಪೆÇಲೀಸ್ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ ಹಾಗೂ ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಎಂ.ಎಂ. ಚರಣ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಶೈಲೇಂದ್ರ, ಸಂಘಟನೆಗಳು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲೂ ಕೂಡ ಕಾರ್ಯ ನಿರ್ವಹಿಸಬೇಕಿದೆ. ಯುವ ಸಮೂಹಕ್ಕೆ ದೊಡ್ಡ ಪಿಡುಗಾಗಿರುವ ಮಾದಕ ವ್ಯಸನ ನಿಯಂತ್ರಿಸುವಲ್ಲಿ ಚಿಂತನೆ ಹರಿಸಬೇಕಿದೆ. ತಮ್ಮಮನೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೇಲೆ ನಿಗಾವಹಿಸುವ ಮೂಲಕ ತಪ್ಪುದಾರಿ ಹಿಡಿಯದಂತೆ ಜಾಗೃತೆ ವಹಿಸಬೇಕಿದೆ ಎಂದು ಕರೆ ನೀಡಿದರು.
ಎಂ.ಎಂ. ಚರಣ್ ಮಾತನಾಡಿ, ಕುಶಾಲನಗರ ಅಭಿವೃದ್ಧಿಗೆ ಕುಡಾ ವ್ಯಾಪ್ತಿಯಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿದ್ದು ಇವುಗಳನ್ನು ನಿಭಾಯಿಸಿ ಸಮರ್ಪಕವಾಗಿ ಯೋಜನೆ ರೂಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭ ಸಂಘದ ಗೌರವ ಅಧ್ಯಕ್ಷ ಪೆÇನ್ನಚ್ಚನ ಮೋಹನ್, ಕಾರ್ಯದರ್ಶಿ ಕುಲ್ಲಚ್ಚನ ಹೇಮಂತ್, ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಕಾನೆಹಿತ್ಲು ಸತೀಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.