ಸೋಮವಾರಪೇಟೆ, ಸೆ. 7: ತಾಲೂಕಿನ ಆಲೂರುಸಿದ್ದಾಪುರದ ಇಬ್ಬರು ವ್ಯಕ್ತಿಗಳು ದಲಿತ ಯುವಕನ ಜಾತಿ ನಿಂದನೆ ಮಾಡಿದ್ದು, ಪೊಲೀಸರು ಮೂರು ದಿನದ ಒಳಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ತಪ್ಪಿದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಆ.30 ರಂದು ಆರೋಪಿ ಗಳು ಮೊಬೈಲ್‍ನಲ್ಲಿ ಸ್ಥಳೀಯ ದಲಿತ ಯುವಕ ಮನೋಜ್‍ಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ಜಾತಿಯನ್ನು ನಿಂದಿಸಿ, ಅದನ್ನು ಮೊಬೈಲ್‍ನಲ್ಲಿ ಇತರರೊಂದಿಗೆ ಹಂಚಿಕೊಂಡಿದ್ದಾರೆ. ಇದರ ದಾಖಲೆಯೊಂದಿಗೆ ಸೆ.1 ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ, ಠಾಣಾಧಿಕಾರಿಗಳು ತಕ್ಷಣ ಜಾತಿ ನಿಂದನೆ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ತಿಳಿಸಿ, 153/ಎ ಸೆಕ್ಷನ್ ನಡಿಯಲ್ಲಿ ದೂರು ದಾಖಲಿಸಿ ದ್ದಾರೆ ಎಂದು ಆರೋಪಿಸಿದರು.

ಆರೋಪಿಗಳ ಮೇಲೆ ಜಾತಿ ನಿಂದನೆ ದೂರು ದಾಖಲಿಸಿ, ಜಿಲ್ಲೆ ಯಿಂದ ಗಡೀಪಾರು ಮಾಡಬೇಕು. ಮೂರು ದಿನಗಳ ಒಳಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿದ್ದ ಸಮಿತಿ ಉಪಾಧ್ಯಕ್ಷ ಕೆ.ಬಿ. ರಾಜು ಮಾತನಾಡಿ, ಅವಹೇಳನ ಮಾಡಿರುವ ಆರೋಪಿಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ತಪ್ಪಿದಲ್ಲಿ ಹೋಬಳಿ ಕೇಂದ್ರದಿಂದ ಜಿಲ್ಲಾ ಕೇಂದ್ರ ದವರೆಗೂ ಹೋರಾಟ ನಡೆಸ ಲಾಗುವದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಎಂ.ಪಿ. ಹೊನ್ನಪ್ಪ, ಖಜಾಂಚಿ ಎಚ್.ಎ. ನಾಗರಾಜು, ಪದಾಧಿಕಾರಿ ಬಿ.ಜೆ. ಈರಪ್ಪ ಉಪಸ್ಥಿತರಿದ್ದರು.

ದಲಿತ ಒಕ್ಕೂಟ ಒತ್ತಾಯ

ಜಾತಿ ಹೆಸರು ಹೇಳಿ ನಿಂದಿಸಿದ ಆರೋಪಿಯನ್ನು ತಕ್ಷಣ ಬಂಧಿಸ ಬೇಕೆಂದು ಸೋಮವಾರಪೇಟೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ. ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಒಕ್ಕೂಟದ ಅಧ್ಯಕ್ಷ ಟಿ.ಈ.ಸುರೇಶ್ ಆರೋಪಿಸಿದ್ದಾರೆ.

ಒಕ್ಕೂಟದ ಜಿಲ್ಲಾ ಸಂಚಾಲಕ ಜೆ.ಆರ್. ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಜೆ.ಎಲ್.ಜನಾರ್ಧನ, ಖಜಾಂಚಿ ಎಸ್.ಎ. ಪ್ರತಾಪ್, ದಲಿತ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷÀ ನಿರ್ವಾಣಪ್ಪ, ಮುಖಂಡ ಈರಪ್ಪ, ಪದಾಧಿಕಾರಿಗಳಾದ ಸಂದೀಪ್, ಗಿರೀಶ್ ಶಾಂತಳ್ಳಿ, ಇಂದ್ರೇಶ್ ಕೊಡ್ಲಿಪೇಟೆ ಮತ್ತಿತರರು ಈ ಸಂದರ್ಭ ಹಾಜರಿದ್ದರು.