ಕೂಡಿಗೆ, ಸೆ. 7: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ನಿವಾಸಿಯಾದ ವೆಂಕಟಪ್ಪ (70) ಎಂಬವರು ಕಳೆದ ಮೂರು ದಿನಗಳ ಹಿಂದೆ ಕಾವೇರಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೂಡುಮಂಗಳೂರು ಗ್ರಾಮದ ಸಮೀಪದಲ್ಲಿ ಹರಿಯುವ ಕಾವೇರಿ ನದಿ ದಂಡೆಯ ಸಮೀಪದಲ್ಲಿ ಶವ ಪತ್ತೆಯಾಗಿದ್ದು, ಪ್ರಕರಣ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.