ಮಡಿಕೇರಿ, ಸೆ. 6 : ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 23 ಕ್ಕೆ ಏರಿದೆ. ಎಮ್ಮೆಮಾಡು ಗ್ರಾಮದ ನಿವಾಸಿ, 58 ವರ್ಷದ ಮಹಿಳೆ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಆಗಸ್ಟ್ 22 ರಂದು ಜ್ವರ ಕಾಣಿಸಿಕೊಂಡಿದ್ದು, ನಾಪೆÇೀಕ್ಲುವಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜ್ವರ ಕಡಿಮೆಯಾಗದ ಕಾರಣ ಹಾಗೂ ಉಸಿರಾಟದ ತೊಂದರೆ ಇದ್ದ ಕಾರಣ ಆಗಸ್ಟ್ 24 ರಂದು ಅವರು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪರೀಕ್ಷೆ ನಡೆಸಲಾಗಿ ವರದಿಯಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತು. ಉಸಿರಾಟದ ತೊಂದರೆ ಇದ್ದ ಕಾರಣ ಕೂಡಲೇ ಐ.ಸಿ.ಯು.ನಲ್ಲಿ ಚಿಕಿತ್ಸೆ ಮುಂದುವರೆಸಿದ್ದು, ತಾ.6 ರಂದು ಬೆಳಗ್ಗಿನ ಜಾವ 1.45 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತ ದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಯಿತು.
ಜಿಲ್ಲೆಯಲ್ಲಿ ಹೊಸದಾಗಿ 44 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1724 ಪ್ರಕರಣಗಳು ವರದಿಯಾಗಿವೆ. 1319 ಮಂದಿ ಗುಣಮುಖರಾಗಿದ್ದು 310 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 91 ಮಂದಿ, ಕೋವಿಡ್ ಕೇರ್ ಸೆಂಟರ್ನಲ್ಲಿ 57 ಮಂದಿ ಹಾಗೂ ಹೋಂ ಐಸೋಲೇಷನ್ನಲ್ಲಿ 162 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ 279 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಮಡಿಕೇರಿ ಬೊಯಿಕೇರಿಯ 41 ವರ್ಷದ ಪುರುಷ ಮತ್ತು 25 ವರ್ಷದ ವ್ಯಕ್ತಿ, ಸುಂಟಿಕೊಪ್ಪ ಕಾನ್ಬೈಲ್ನ ನಾಕೂರುವಿನ 62 ವರ್ಷದ ಪುರುಷ. ಚೆಟ್ಟಳ್ಳಿ ಪೆÇನ್ನತ್ಮೊಟ್ಟೆಯ 52 ವರ್ಷದ ಪುರುಷ, ಕೊಡ್ಲಿಪೇಟೆ ಅರೆಹಳ್ಳಿಯ 24 ವರ್ಷದ ಮಹಿಳೆ, ಸೋಮವಾರಪೇಟೆ ಶೆಟ್ಟಳ್ಳಿ ಅಂಚೆಯ ಕೂತಿ ಸರ್ಕಾರಿ ಶಾಲೆ ಬಳಿಯ 14 ವರ್ಷದ ಬಾಲಕ, ಕೊಡ್ಲಿಪೇಟೆ ಹನಳಿ ಅಂಚೆಯ ತಾಲೂರು ಗ್ರಾಮದ 24 ವರ್ಷದ ಮಹಿಳೆ, ಕೊಡ್ಲಿಪೇಟೆ ಬೆಸೂರುವಿನ ಚಿಕ್ಕಕುಂದದ 33 ವರ್ಷದ ಪುರುಷ, ಕೊಡ್ಲಿಪೇಟೆ ನೀರುಗುಂದದ ಮುರುಗನಹಳ್ಳಿ ಗ್ರಾಮದ 36 ವರ್ಷದ ಪುರುಷ, ಕೊಡ್ಲಿಪೇಟೆ ದೊಡ್ಡಕೊಡ್ಲಿಯ ಅರ್ಕನಹಳ್ಳಿ ಗ್ರಾಮದ 77 ವರ್ಷದ ಪುರುಷ, 35 ವರ್ಷದ ಮಹಿಳೆ, 5 ವರ್ಷದ ಬಾಲಕಿ ಮತ್ತು 45 ವರ್ಷದ ಪುರುಷ, ಸೋಮವಾರಪೇಟೆ ನಗರೂರುವಿನ ಕೋರ್ಟ್ ಬಳಿಯ ವಸತಿಗೃಹದ 28 ವರ್ಷದ ಪುರುಷ, ಮಡಿಕೇರಿ ಗೌಳಿಬೀದಿಯ ಪ್ರಸಾದ್ ಕ್ಲಿನಿಕ್ ಬಳಿಯ 52 ವರ್ಷದ ಮಹಿಳೆ, ಮಡಿಕೇರಿ ಜಯನಗರದ 18ನೇ ಬ್ಲಾಕಿನ 65 ವರ್ಷದ ಮಹಿಳೆ, ಮಡಿಕೇರಿ ಬೆಟ್ಟಗೇರಿಯ ಮಿಲ್ ಎದುರಿನ ಉದಯ ಶಾಲೆ ಬಳಿಯ 57 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆ, ತಿತಿಮತಿಯ ಹೆಬ್ಬಾಲೆ ಗ್ರಾಮದ ದೇವರಪುರದ 58 ವರ್ಷದ ಮಹಿಳೆ, ವೀರಾಜಪೇಟೆ ಸೀಗೆತೋಡುವಿನ ಆರ್.ಎಂ.ಸಿ ಬಳಿಯ 42 ವರ್ಷದ ಪುರುಷ ಮತ್ತು 6 ವರ್ಷದ ಬಾಲಕಿ, ವಿಜಯನಗರ 1ನೇ ಹಂತದ 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ, ಗೋಣಿಕೊಪ್ಪ ಅರವತ್ತೊಕ್ಲುವಿನ ಮಸೀದಿ ಬಳಿಯ 33 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷ, ಗೋಣಿಕೊಪ್ಪದ ಕೋಣನಕಟ್ಟೆ ಮಾರಿಯಮ್ಮ ದೇವಾಲಯ ಬಳಿಯ 24 ವರ್ಷದ ಮಹಿಳೆ, ಗೋಣಿಕೊಪ್ಪದ 2ನೇ ಬ್ಲಾಕಿನ 77 ವರ್ಷದ ಮಹಿಳೆ, ಗೋಣಿಕೊಪ್ಪದ ಅರವತ್ತೊಕ್ಲುವಿನ ಕಾಫಿ ಬೋರ್ಡ್ ಬಳಿಯ 31 ವರ್ಷದ ಪುರುಷ, ಕುಟ್ಟದ ಸಿಂಕೋನ ಗ್ರಾಮದ 38 ವರ್ಷದ ಮಹಿಳೆ, ಕುಟ್ಟದ ಸಿಂಕೋನದ ಅಂಗನವಾಡಿ ಬಳಿಯ 57 ವರ್ಷದ ಪುರುಷ, ವೀರಾಜಪೇಟೆ ಕಲ್ಲುಬಾಣೆಯ ವಾಟರ್ ಟ್ಯಾಂಕ್ ಸಮೀಪದ 61 ವರ್ಷದ ಮಹಿಳೆ, ವೀರಾಜಪೇಟೆ ಪೆÇಲೀಸ್ ವಸತಿಗೃಹದ 53 ವರ್ಷದ ಪುರುಷ, ವೀರಾಜಪೇಟೆ ಮುತ್ತಪ್ಪ ದೇವಾಲಯ ಬಳಿಯ 29 ವರ್ಷದ ಮಹಿಳೆ, ಕುಶಾಲನಗರ ಪೆÇಲೀಸ್ ಠಾಣೆ ಹಿಂಭಾಗದ 61 ವರ್ಷದ ಮಹಿಳೆ, ಸೋಮವಾರಪೇಟೆ ಯಲ್ತರೆÀಶೆಟ್ಟಳ್ಳಿಯ 55 ವರ್ಷದ ಮಹಿಳೆ, ಮಡಿಕೇರಿ ಭಗವತಿ ನಗರದ 9 ವರ್ಷದ ಬಾಲಕಿ ಮತ್ತು 42 ವರ್ಷದ ಪುರುಷ, ಚೇರಂಬಾಣೆ ಬೆಂಗೂರು ಗ್ರಾಮದ 40 ವರ್ಷದ ಪುರುಷ, ಭಾಗಮಂಡಲ ಚೆಟ್ಟಿಮಾನಿಯ ಪಡಕಲ್ಲು ಗ್ರಾಮದ 58 ವರ್ಷದ ಪುರುಷ, ಭಾಗಮಂಡಲ ಪೆಟ್ರೋಲ್ ಪಂಪ್ ಬಳಿಯ 26 ವರ್ಷದ ಪುರುಷ, ಭಾಗಮಂಡಲ ಪೆÇಲೀಸ್ ವಸತಿಗೃಹದ 56 ಮತ್ತು 29 ವರ್ಷದ ಪುರುಷರು, ತಮಿಳುನಾಡಿನ 45 ವರ್ಷದ ಪುರುಷ, ಮೂರ್ನಾಡು ಪಟ್ಟಣದ ಎಸ್.ಬಿ.ಐ ಹಿಂಭಾಗದ 36 ವರ್ಷದ ಪುರುಷ, ಗೋಣಿಕೊಪ್ಪದ ಎಚ್.ಸಿ ಪುರ ಟೆಲಿಫೆÇೀನ್ ಎಕ್ಸ್ ಚೇಂಚ್ ಬಳಿಯ 19 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.