ಶನಿವಾರಸಂತೆ,ಸೆ. 6: ಸಮೀಪದ ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯ ಪೈಸಾರಿ ಸರ್ವೆ ನಂ. 30ರ 0.16 ಎಕರೆ ಸರಕಾರಿ ಹೊನ್ನಮ್ಮನ ಕೆರೆ ಜಾಗದ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲಾಯಿತು.

ಈ ಸಂದರ್ಭ ಉಪತಹಶೀಲ್ದಾರ್ ಗೋವಿಂದರಾಜ್, ಕಂದಯಾ ಪರಿವೀಕ್ಷಕ ನಂದಕುಮಾರ್, ಗ್ರಾಮ ಲೆಕ್ಕಾಧಿಕಾರಿ ಜಟ್ನೆಪ್ಪ, ಗ್ರಾಮ ಸಹಾಯಕರಾದ ಯೋಗೇಶ್, ಮಹೇಶ್, ಪಿಡಿಒ ಹೇಮಲತಾ ಹಾಗೂ ತಾಲೂಕು ಸರ್ವೆ ಅಧಿಕಾರಿ ಕಿಶೋರ್ ಪಾಟೀಲ್ ಹಾಜರಿದ್ದರು.