ವೀರಾಜಪೇಟೆ, ಸೆ. 6: ಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ಅಂಬಟ್ಟಿ ಬಿಟ್ಟಂಗಾಲದಲ್ಲಿರುವ ನಾರಾಯಣ ಗುರು ಮಂದಿರದಲ್ಲಿ ತಾಲೂಕು ಬಿಲ್ಲವ ಸೇವಾ ಸಮಾಜ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಬಾರಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಬಿ.ಎಂ. ಲಿಪಿಕಾ, ಬಿ.ಎಸ್. ಹಿತಶ್ರೀ, ಕೆ.ಪಿ. ದಿವಿನ್, ಬಿ.ಪಿ. ತಶ್ವಿನಿ, ಬಿ.ಬಿ. ತಶ್ವಿನಿ, ಬಿ.ಎಸ್. ಮೋಕ್ಷಿತ್, ಎಸ್‍ಎಸ್‍ಎಲ್‍ಸಿಯಲ್ಲಿ ಬಿ.ಜೆ. ಲಾಸ್ಯ, ಬಿ.ಜೆ. ಅಶ್ವಿತಾ, ಬಿ.ಪಿ. ಜಯಶ್ರಿ, ಬಿ.ಆರ್. ಪ್ರಪುಲ್, ಬಿ.ಡಿ. ಚೈತನ್ಯ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಬಿಲ್ಲವ ಸೇವಾ ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ. ಗಣೇಶ್, ಉಪಾಧ್ಯಕ್ಷ ಪುರುಷೋತಮ್, ಕಾರ್ಯದರ್ಶಿ ಜನಾರ್ಧನ್, ಖಜಾಂಚಿ ಬಿ.ಎಂ. ಸತೀಶ್, ಸಹಕಾರ್ಯದರ್ಶಿ ಮಣಿ, ಬಿ.ಜಿ. ನಾರಾಯಣ್, ವಿಗ್ರಹ ದಾನಿಗಳಾದ ನಾರಾಯಣ್, ಬಿ.ಆರ್. ಬೋಜಪ್ಪ, ಮತ್ತಿತರರು ಉಪಸ್ಥಿತರಿದ್ದರು.