ಮಡಿಕೇರಿ, ಸೆ. 6: ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೇಂದ್ರ ತಂಡವು ತಾ. 8 ರಂದು (ನಾಳೆ) ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಕೇಂದ್ರ ತಂಡದಲ್ಲಿ ಕೆ.ವಿ. ಪ್ರತಾಪ್, ಡಾ. ಭರತೇಂದ್ ಕುಮಾರ್, ಡಾ. ಕೆ. ಮನೋಹರನ್, ಗುರುಪ್ರಸಾದ್ ಜೆ., ಎಸ್. ಸದಾನಂದ ಬಾಬು, ವಿ.ಪಿ. ರಾಜ್ವೇದಿ ಇವರು ತಂಡದಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.