ಮಡಿಕೇರಿ, ಸೆ. 6: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ತಾ. 13 ರಂದು ಸಂಜೆ ಕುಶಾಲನಗರಕ್ಕೆ ಆಗಮಿಸಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ತಾ. 14 ರಂದು ಬೆಳಿಗ್ಗೆ 10.15 ಗಂಟೆಗೆ ಜಿ.ಪಂ. ಸಭಾಂಗಣದಲ್ಲಿ ಜರುಗಲಿರುವ, ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್‍ಫೋನ್ ವಿತರಣೆಯಲ್ಲಿ ಪಾಲ್ಗೊಂಡು, ಬಳಿಕ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಿದ್ದಾರೆ.
ಅಪರಾಹ್ನ 3 ಗಂಟೆಗೆ ಬಿಳಿಗೇರಿ, ಕೆ.ನಿಡುಗಣೆ, ಗಾಳಿಬೀಡುವಿನಲ್ಲಿ ಸಂತ್ರಸ್ತರ ಪುನರ್ವಸತಿ ಕಾಮಗಾರಿ ವೀಕ್ಷಿಸುವ ಸಚಿವರು, ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.