ಮಡಿಕೇರಿ, ಸೆ. 6: ನಗರದ ಎಎಲ್‍ಜಿ ಕ್ರೆಸೆಂಟ್ ಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರಂತೆ ಮಕ್ಕಳ ಅರಿವಿನ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತಮಗೊಳಿಸುವ ಪ್ರಯತ್ನದಲ್ಲಿ ಪಠ್ಯ ಕ್ರಮ ಪರಿಷ್ಕರಿಸುವ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ತೆಗೆದುಕೊಂಡ ನಿರ್ಧಾರದ ಬಗ್ಗೆ ಶಿಕ್ಷಕರಿಂದ ಸಲಹೆಯನ್ನು ನೀಡಲು ಸೂಚಿಸಿದ ಮೇರೆಗೆ ಶಾಲೆಯಲ್ಲಿ ಶಿಕ್ಷಕರಿಗೆ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ವಹಿಸಿದ್ದರು. ಶಾಲೆಯ ಆಡಳಿತ ಮಂಡಳಿಯ ಸದಸ್ಯರುಗಳಾದ ಫಯಾಜ್ ಹಾಗೂ ಮೊಹಮ್ಮದ್ ಉಮ್ಮರ್ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲೆ ಜೋಯಿಸಿ ವಿನಯ ನೇತೃತ್ವದಲ್ಲಿ ಶಿಕ್ಷಕರು ಸಲಹೆ-ಸೂಚನೆ ನೀಡಿದರು.