ಮಡಿಕೇರಿ, ಸೆ. 6: ಶ್ರೀಮಂಗಲ ಸನಿಹದ ಕುರ್ಚಿ ಗ್ರಾಮದ ತೋಟವೊಂದರಲ್ಲಿ ಇಂದು ಭಾರೀ ಗಾತ್ರದ ಹೆಬ್ಬಾವು ಗೋಚರಿಸಿದೆ. ಸುಮಾರು 20 ಅಡಿಯಷ್ಟು ಉದ್ದದೊಂದಿಗೆ ಭಾರೀ ಗಾತ್ರದ ಹಾವು ಆತಂಕ ಸೃಷ್ಟಿಸಿತ್ತು. ಇದನ್ನು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಉರಗ ತಜ್ಞರಾದ ಕುಂಞಂಗಡ ಬೋಸ್ ಮಾದಪ್ಪ, ಚಟ್ಟಂಗಡ ಸೋಮಣ್ಣ ಅವರುಗಳು ಹಿಡಿದು ಸನಿಹದ ಅರಣ್ಯಕ್ಕೆ ಬಿಟ್ಟಿದ್ದಾರೆ.