ಮಡಿಕೇರಿ, ಸೆ. 5 : ಸೋಮವಾರಪೇಟೆ ತಾಲೂಕಿನ ಕುಸುಬೂರು ನಿವಾಸಿ 70 ವರ್ಷದ ಪುರುಷರೊಬ್ಬರು ಕಳೆದ 15 ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಿದ್ದರು. ತುಂಬಾ ಸುಸ್ತು ಇದ್ದ ಕಾರಣ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಹೋಗಲು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯರು ಸಲಹೆ ನೀಡಿದ ಮೇರೆಗೆ ಆ.30 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೋವಿಡ್ ಪರೀಕ್ಷೆ ನಡೆಸಲಾಗಿ ವರದಿಯಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರ ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಇದ್ದ ಕಾರಣ ಕೂಡಲೇ ಐ.ಸಿ.ಯು.ನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರೆಸಿದ್ದು, ತಾ.5 ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತ ದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಯಿತು.

ಜಿಲ್ಲೆಯಲ್ಲಿ ಹೊಸದಾಗಿ 30 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 1680 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 1319 ಮಂದಿ ಗುಣಮುಖರಾಗಿದ್ದಾರೆ. 339 ಪ್ರಕರಣಗಳು ಸಕ್ರಿಯವಾಗಿವೆ. (ಮೊದಲ ಪುಟದಿಂದ) ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 98 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 61 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿ 180 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 258 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ವೀರಾಜಪೇಟೆ ಗಾಂಧಿನಗರದ ಕೃಷಿ ಕಚೇರಿ ಬಳಿಯ 42 ವರ್ಷದ ಪುರುಷ, ವೀರಾಜಪೇಟೆ ಪಂಜರಪೇಟೆಯ ಸರ್ವೋದಯ ಕಾಲೇಜು ಎದುರಿನ 37 ವರ್ಷದ ಮಹಿಳೆ, ಬೊಯಿಕೇರಿಯ ಅಜ್ಜಪ್ಪ ದೇವಾಲಯ ಬಳಿಯ 55 ವರ್ಷದ ಪುರುಷ, ಮಕ್ಕಂದೂರಿನ ಕಾಪರ್ ಹಿಲ್ ಹೋಂಸ್ಟೇಯ 32 ಮತ್ತು 37 ವರ್ಷದ ಪುರುಷರು, ಸೋಮವಾರಪೇಟೆ ಹೆಬ್ಬಾಲೆ ಮುಖ್ಯ ರಸ್ತೆಯ ಬಸ್ ನಿಲ್ದಾಣ ಬಳಿಯ 21 ವರ್ಷದ ಪುರುಷ, ಮೇಕೇರಿಯ ಸಾಯಿ ಬಡಾವಣೆ ಬಳಿಯ 38 ವರ್ಷದ ಪುರುಷ, ಮಡಿಕೇರಿ ವೈವಸ್ ಆಸ್ಪತ್ರೆ ಬಳಿಯ 35 ವರ್ಷದ ಪುರುಷ, ಗೋಣಿಕೊಪ್ಪ 1ನೇ ಬ್ಲಾಕಿನ ಕಾವೇರಿ ಕಾಲೇಜು ಹಾಸ್ಟೆಲ್ ಬಳಿಯ 45 ವರ್ಷದ ಮಹಿಳೆ, ಮಡಿಕೇರಿ ಪೆÇಲೀಸ್ ವಸತಿಗೃಹದ 37 ವರ್ಷದ ಪುರುಷ, ಮಡಿಕೇರಿ ಗದ್ದಿಗೆಯ ಮದರಾಸ ಬಳಿಯ 50 ವರ್ಷದ ಪುರುಷ, ಮಡಿಕೇರಿ ಮಂಗಳಾದೇವಿ ನಗರದ 34 ವರ್ಷದ ಪುರುಷ, ಬೊಯಿಕೇರಿಯ ಅಂಚೆ ಕಚೇರಿ ಸಮೀಪದ 42 ವರ್ಷದ ಪುರುಷ, 38 ವರ್ಷದ ಮಹಿಳೆ, 49, 69 ವರ್ಷದ ಪುರುಷರು ಮತ್ತು 65 ವರ್ಷದ ಮಹಿಳೆ, ಮಡಿಕೇರಿ ಕಡಗದಾಳುವಿನ ಸರ್ಕಾರಿ ಶಾಲೆ ಬಳಿಯ 66 ವರ್ಷದ ಮಹಿಳೆ ಮತ್ತು 77 ವರ್ಷದ ಪುರುಷ, ಮಡಿಕೇರಿ ಅಶೋಕಪುರದ 40 ವರ್ಷದ ಪುರುಷ, ಸೋಮವಾರಪೇಟೆ ಶನಿವಾರಸಂತೆ ಮುಖ್ಯ ರಸ್ತೆಯ 52 ವರ್ಷದ ಮಹಿಳೆ, ಶ್ರೀಮಂಗಲ ಚೇರಲದ 59 ವರ್ಷದ ಮಹಿಳೆ, ಮಡಿಕೇರಿ ಕೊಯನಾಡು ಹೌಸ್ ಬಳಿಯ 59 ವರ್ಷದ ಪುರುಷ, ಶಿರಂಗಾಲದ ನಾಕೂರು ಬಳಿಯ 27 ವರ್ಷದ ಮಹಿಳೆ ಮತ್ತು 31 ವರ್ಷದ ಪುರುಷ, ವೀರಾಜಪೇಟೆ ವಿದ್ಯಾನಗರದ ಬ್ರೈಟ್ ಶಾಲೆ ಬಳಿಯ 51 ವರ್ಷದ ಪುರುಷ, ಮಡಿಕೇರಿ ಶಾಂತಿನಿಕೇತನ ರಸ್ತೆಯ ಜಯನಗರದ 18ನೇ ಬ್ಲಾಕಿನ 56 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 36 ವರ್ಷದ ಪುರುಷ, ಮಡಿಕೇರಿ ಪುಟಾಣಿನಗರದ ಅಂಗನವಾಡಿ ಬಳಿಯ 33 ವರ್ಷದ ಮಹಿಳೆ, ಮಡಿಕೇರಿ ಈಸ್ಟ್ ಎಂಡ್ ಪೆಟ್ರೋಲ್ ಪಂಪ್ ಹಿಂಭಾಗದ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.