ನಾಪೆÇೀಕ್ಲು, ಸೆ. 5 : ಸಮೀಪದ ಚೆರಿಯಪರಂಬು ಪೈಸಾರಿಯ ನಿವಾಸಿ ಕೂಲಿ ಕಾರ್ಮಿಕ ಉಮೇಶ್ (21 ) ಎಂಬಾತ ಮದ್ಯದ ಅಮಲಿನಲ್ಲಿ ಹೊಳೆ ಬದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಈತ ಕೆಲಸಕ್ಕೆ ಹೋಗದೆ ತಾಯಿ ಚಿಮ್ಮೆ ದುಡಿದ ಹಣವನ್ನು ಮದ್ಯ ಸೇವಿಸಲು ಕೊಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದ್ದು, ತಾ. 31 ರಂದು ಮನೆಯಲ್ಲಿ ತಾಯಿಯೊಂದಿಗೆ ಜಗಳವಾಡಿ ಮನೆಯಿಂದ ತೆರಳಿದಾತನ ಶವ ಇಂದು ಕಾವೇರಿ ನದಿಯ ದಡದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ನಾಪೆÇೀಕ್ಲು ಪೊಲೀಸ್ ಠಾಣೆಯ ಎ.ಎಸ್.ಐ. ಗೋಪಾಲ ಮತ್ತು ಸಿಬ್ಬಂದಿ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.