ಮಡಿಕೇರಿ, ಸೆ. 4: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಕೈಲ್‍ಮುಹೂರ್ತ ಹಬ್ಬವನ್ನು ನಾಡಿನಾದ್ಯಂತ ಸರಳವಾಗಿ ಆಚರಿಸಲಾಯಿತು. ಕೋವಿಡ್ ಹಿನ್ನೆಲೆ ಸಾಮೂಹಿಕ ಆಚರಣೆಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಮನೆ - ಮನೆಗಳನ್ನು ಬಂಧು - ಭಗಿನಿಯರೊಡಗೂಡಿ, ಆಚರಣೆ ಮಾಡಲಾಯಿತು. ಕೊಡಗಿನ ಆಯುಧಪೂಜೆ ಎಂದೇ ಪರಿಗಣಿಸಲ್ಪಟ್ಟಿರುವ ಕೃಷಿ ಸಂಬಂಧಿತ ಹಬ್ಬವಾದ ಕೈಲ್‍ಮುಹೂರ್ತವನ್ನು ಕೃಷಿಗೆ ಬಳಸಲಾಗುವ ನೇಗಿಲು, ನೊಗ, ಎತ್ತು, ಕತ್ತಿ, ಗುದ್ದಲಿ ಸಂಪ್ರದಾಯಬದ್ಧ ಆಯುಧವಾದ ‘ಕೋವಿ’ಗಳನ್ನು ಪೂಜಿಸುವ ಮೂಲಕ ಆಚರಿಸಲಾಯಿತು. ಸಾಂಪ್ರದಾಯಿಕ ಆಹಾರ ಹಬ್ಬದ ವಿಶೇಷವಾಗಿತ್ತು.

ಶ್ರೀಮಂಗಲ : ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಪಯ್ಯಡ ಮಂದ್‍ನಲ್ಲಿ ಕೋವಿಯಲ್ಲಿ ಸಾಂಪ್ರ್ರದಾಯಿಕವಾಗಿ ಗುಂಡು ಹೊಡೆದು ಕೋವಿ, ಕತ್ತಿಗಳಿಗೆ ಮತ್ತು ಮಂದ್‍ಗೆ ಪೂಜೆ ಸಲ್ಲಿಸಿ ಕೈಲ್‍ಪೆÇೀಳ್ದ್ ಹಬ್ಬವನ್ನು ಸಾಂಪ್ರ್ರದಾಯಿಕವಾಗಿ ಆಚರಿಸಲಾಯಿತು.

ಮಂದ್‍ಗೆ ತಳಿರುತೋರಣ ಕಟ್ಟಿ ಪೂಜೆ ಸಲ್ಲಿಸಲಾಯಿತು. ಇದಕ್ಕೂ ಮೊದಲು ಈ ಗ್ರಾಮದ ಮಹಾದೇವರ ಮತ್ತು ಮಲೆಮುತ್ತಪ್ಪ ದೇವಸ್ಥಾನಗಳಿಗೆ ಸಂಪ್ರದಾಯದಂತೆ “ಪಡೆಮೂತ” ಮತ್ತು “ಬೋಟೆಮೂತ” ದೊಂದಿಗೆ ತೆರಳಿ ಪೂಜೆ ಸಲ್ಲಿಸಲಾಯಿತು.

ಇಬ್ಬರು ಮೂತದಾರರು ಮಂದ್‍ಗೆ ಆಗಮಿಸಿದ ಗ್ರಾಮಸ್ಥರನ್ನು ತಮ್ಮ ಮನೆಗೆ ಕರೆದೊಯ್ದು ಹಬ್ಬದ ವಿಶೇಷ ಊಟೋಪಚಾರವನ್ನು ಸಾಮೂಹಿಕವಾಗಿ ಮಾಡಿದರು.

ಈ ಸಂದರ್ಭ ತಕ್ಕ ಮುಖ್ಯಸ್ಥರಾದ ಬಾನಂಗಡ ರಾಜಶೇಖರ್, ಗ್ರಾಮದ ಅಧ್ಯಕ್ಷ ಬಯವಂಡ ಮೋಹನ್, ಕಾರ್ಯದರ್ಶಿ ಮಂಡಗಡ ಅಶೋಕ್, ಸಮಿತಿ ಸದಸ್ಯ ಮಾಚಿಮಾಡ ಗಗನ್ ಮತ್ತಿತರರು ಸಾಂಪ್ರದಾಯಿಕ ಉಡುಪಿನಲ್ಲಿ ಪದ್ದತಿಯನ್ನು ನಡೆಸಿಕೊಟ್ಟರು.

* ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಮೂಂದ್‍ನಾಡ್ ಟಿ.ಶೆಟ್ಟೀಗೇರಿ ಕೊಡವ ಸಮಾಜದಲ್ಲಿ ಕೈಲ್‍ಪೆÇೀಳ್ದ್ ಪ್ರಯುಕ್ತ ವಾಹನಗಳಿಗೆ ಮತ್ತು ಕೋವಿ, ಕತ್ತಿಗಳಿಗೆ ಪೂಜೆ ನಡೆಸಲಾಯಿತು. ವಾಹನಗಳು, ಕೋವಿ, ಕತ್ತಿಗಳನ್ನು ತೊಳೆದು ಅವುಗಳಿಗೆ ಶ್ರೀಗಂಧವನ್ನು ಲೇಪಿಸಿ, ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೊಟ್ರಮಾಡ ಅರುಣ್ ಅಪ್ಪಣ್ಣ, ಉಪಾಧ್ಯಕ್ಷ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ಎ. ರಮೇಶ್, ಸದಸ್ಯರುಗಳಾದ ಕಟ್ಟೇರ ಈಶ್ವರ, ಮಾಣೀರ ವಿಜಯ ನಂಜಪ್ಪ, ಮನ್ನೇರ ಎ. ಕಲ್ಪನಾ, ನಾಡ್ ತಕ್ಕರಾದ ಕೈಬಿಲೀರ ಹರೀಶ್ ಅಪ್ಪಯ್ಯ ಮತ್ತಿತರ ಸಾಂಪ್ರಾದಾಯಿಕ ಉಡುಪಿನಲ್ಲಿ ಕಾರ್ಯಕ್ರಮವನ್ನು ನಡೆಸಿದರು.

ಪೆÇನ್ನಂಪೇಟೆ: ಕೈಲ್‍ಪೆÇಳ್ದ್ ಹಬ್ಬವನ್ನು ಪೆÇನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದಲ್ಲಿ ಸಾಮೂಹಿಕವಾಗಿ, ಸಾಂಪ್ರದಾಯಿಕವಾಗಿ, ಆಚರಿಸಲಾಯಿತು. ಗ್ರಾಮದ ಭದ್ರಕಾಳಿ ಅಂಬಲದಲ್ಲಿ ಗ್ರಾಮಸ್ಥರೆಲ್ಲ ಸೇರಿ ಕೋವಿ, ಪೀಚೆಕತ್ತಿ, ಒಡಿಕತ್ತಿ, ಹಾಗೂ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿದರು. ನಂತರ ಅರಳಿಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕುತ್ತ ಮುಹೂರ್ತ ಹಾಡನ್ನು ಹಾಡಿ ದೇವರನ್ನು ಸ್ತುತಿಸಿದರು.

ಹಬ್ಬದ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಗ್ರಾಮದ ಹಿರಿಯರು ಕಿರಿಯರು ಭಾಗವಹಿಸಿ ತಮ್ಮ ಗುರಿ ಪ್ರದರ್ಶನ ಮಾಡಿದರು. ಅಂತಿಮ ಸುತ್ತಿನಲ್ಲಿ ಕಳ್ಳಿಚಂಡ ಗಿಣಿ ಉತ್ತಪ್ಪ ಪ್ರಥಮ, ಮಲ್ಚೀರ ರಮೇಶ್ ಸೋಮಯ್ಯ ದ್ವಿತೀಯ ಹಾಗೂ ಚೀರಂಡ ಪ್ರವೀಣ್ ಚಂಗಪ್ಪ ತೃತೀಯ ಸ್ಥಾನ ಪಡೆದುಕೊಂಡರು.

ಈ ಸಂದರ್ಭ ಗ್ರಾಮಸ್ಥರಾದ ಚೀರಂಡ ಕಂದ ಸುಬ್ಬಯ್ಯ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮಸ್ಥರು ಒಂದೆಡೆ ಸೇರಿ ಹಬ್ಬ ಆಚರಿಸುತ್ತಿದ್ದೇವೆ. ಕೈಲ್ ಮುಹೂರ್ತ ಹಬ್ಬ ಕೃಷಿ ಚಟುವಟಿಕೆಗಳನ್ನು ಮುಗಿಸಿ ದಣಿದ ದೇಹಕ್ಕೆ ಹಾಗೂ ಮನಸಿಗೆ ಖುಷಿಕೊಡುವ ಹಬ್ಬವಾಗಿದ್ದು, ಆಯುಧಗಳಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಕೊಡವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದರು.

ಈ ಸಂಧರ್ಭ ಗ್ರಾಮದ ಅಧ್ಯಕ್ಷರಾದ ಚೀರಂಡ ಗಣಪತಿ, ತೊಣಕೇರಿ ಭಗವತಿ ದೇವಸ್ಥಾನ ಮಂಡಳಿ ಅಧ್ಯಕ್ಷ ಕಳ್ಳಿಚಂಡ ಶಂಭು ಪೂವಯ್ಯ, ಹಿರಿಯರಾದ ಚೀರಂಡ ಶಂಭು ಬೆಳ್ಳಿಯಪ್ಪ, ಮಲ್ಚೀರ ಕುಶಾಲಪ್ಪ ಹಾಗೂ ಗ್ರಾಮಸ್ಥರು ಇದ್ದರು. ಅರ್ಚಕರಾದ ಅಶೋಕ್ ಭಟ್ ಪೂಜಾ ಕಾರ್ಯ ನೆರವೇರಿಸಿದರು.

ಆಲೂರು ಸಿದ್ದಾಪುರ: ಸಮೀಪದ ಗ್ರಾ.ಪಂ.ವ್ಯಾಪ್ತಿಯ ಹಿತ್ತಲುಗದ್ದೆ ಗ್ರಾಮದಲ್ಲಿ ಗ್ರಾಮಸ್ಥರು ಸೇರಿಕೊಂಡು ಕೈಲ್ ಮಹೂರ್ತ ಹಬ್ಬ ಆಚರಿಸಿದರು. ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷ ಆಲೂರು ಸಿದ್ದಾಪುರ ವಿಜಯ ಯುವಕ ಸಂಘದ ವತಿಯಿಂದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಕೈಲ್ ಮುಹೂರ್ತ ಕ್ರೀಡಾಕೂಟವನ್ನು ರದ್ದುಗೊಳಿಸಲಾಗಿತ್ತು.

ಕ್ರೀಡಾಕೂಟ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಹಿತ್ತಲುಗದ್ದೆ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಸಾಂಪ್ರದಾಯದಂತೆ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಿದರು ನಂತರ ಗ್ರಾಮದಲ್ಲಿ ಪುಟ್ಟದಾದ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭ ಗ್ರಾಮದ ಯುವಕರು ಸೇರಿಕೊಂಡು ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮದ ಹಿರಿಯರನ್ನು ಆಹ್ವಾನಿಸಿ ಸನ್ಮಾನಿಸಿದರು.

ಶ್ರೀಮಂಗಲ : ಪೆÇನ್ನಂಪೇಟೆ ಕೊಡವ ಸಮಾಜದಲ್ಲಿ ಪೆÇನ್ನಂಪೇಟೆ ಕೊಡವ ಸಮಾಜ ಮತ್ತು ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದ ಆಶ್ರಯದಲ್ಲಿ ಪ್ರತಿವರ್ಷದಂತೆ ನಡೆಸುವ ಕೈಲ್‍ಪೆÇಳ್ದ್ ಹಬ್ಬವನ್ನು ಕೋವಿ, ಕತ್ತಿ, ನೇಗಿಲು ನೋಗ ಮತ್ತು ಕೃಷಿ ಪರಿಕರಗಳಿಗೆ ಪೂಜೆ ಮಾಡುವ ಮೂಲಕ ಸಾಂಪ್ರ್ರದಾಯಿಕವಾಗಿ ಆಚರಿಸಲಾಯಿತು.

ಕೊಡವ ಸಮಾಜದ ಸಭಾಂಗಣದಲ್ಲಿ ವಿವಿಧ ಬಗೆಯ ಕೋವಿ, ಕತ್ತಿಗಳಿಗೆ ಸಾಂಪ್ರ್ರದಾಯಿಕವಾಗಿ ಬಳಸುವ ಕಾಡಿನಲ್ಲಿ ಬೆಳೆಯುವ “ತೋಕ್ ಪೂ” ತಂದು ಹಬ್ಬ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಮಾಜಿ ಅಧ್ಯಕ್ಷ ಚೆರಿಯಪಂಡ ರಾಜ ನಂಜಪ್ಪ, ಕ್‍ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಗಾಂಡಂಗಡ ದೇವಯ್ಯ, ಕೊಡವ ಸಮಾಜದ ಖಜಾಂಚಿ ಮೂಕಳೇರ ಲಕ್ಷಣ್, ಪ್ರಮುಖರಾದ ಕಾಳಿಮಾಡ ಮೋಟಯ್ಯ, ಸಿ. ಅಪ್ಪಣ್ಣ, ಕೊಟೇರ ಕಿಶನ್, ಅಡ್ಡಂಡ ಡಾಲಿ, ಮೂಕಳಮಾಡ ಬೊಳ್ಳಿಕಟ್ಟಿ, ಮಲ್ಲಮಾಡ ಪ್ರಭು, ಅಡ್ಡಂಡ ಸುನೀಲ್, ಅಜ್ಜಿಕುಟ್ಟೀರ ಶುಭ, ಅಣ್ಣೀರ ಮಾದಯ್ಯ, ಮತ್ರಂಡ ಕಬೀರ್‍ದಾಸ್, ಮದ್ರೀರ ಸಂಪತ್, ಕೊಣಿಯಂಡ ಬೋಪಣ್ಣ, ಮುದ್ದಿಯಡ ಸಜನ್, ಬೋಪಣ್ಣ, ಪಟ್ರಂಗಡ ರಂಜನ್, ಚಕ್ಕೇರ ರಮೇಶ್, ಕಳ್ಳಿಚಂಡ ಬೋಪಯ್ಯ, ಬೊಳ್ಳಿಮಾಡ ಧನು, ಮತ್ರಂಡ ದೀಪಕ್, ಮಚ್ಚಮಾಡ ಮಂಜು, ಸುಬ್ಬಯ್ಯ, ಮೂಕಳೇರ ಮಧು, ಅಪ್ಪೆಂಗಡ ರನ್ನು, ಮುಕ್ಕಾಟಿರ ಅಯ್ಯಪ್ಪ, ಕೆ. ಪೂವಣ್ಣ, ಕೊಟ್ರಮಾಡ ಬೋಪಯ್ಯ ಮತ್ತಿತರ ಹಾಜರಿದ್ದರು.

ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಕೈಲ್‍ಪೋದ್ ಆಚರಣೆ ನಡೆಯಿತು. ಈ ವ್ಯಾಪ್ತಿಯ ಹಲವಾರು ಮನೆಗಳಲ್ಲಿ ಸಂಪ್ರದಾಯದಂತೆ ಆಯುಧಗಳನ್ನು ಇಟ್ಟು ಕುಟುಂಬದವರೊಂದಿಗೆ ಪೂಜೆ ಸಲ್ಲಿಸಲಾಯಿತು.

ಮಡಿಕೇರಿ : ಬೆಂಗಳೂರು ಕೊಡವ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಕೈಲ್‍ಪೊಳ್ದ್ ಹಬ್ಬ ಆಚರಿಸಲಾಯಿತು. ಈ ಸಂದರ್ಭ ಸಮಾಜದ ಅಧ್ಯಕ್ಷ ಎಮ್.ಟಿ. ನಾಣಯ್ಯ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.

ಚೆಟ್ಟಳ್ಳಿ : ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್‍ಮನೆಯಲ್ಲಿ ಸೆ. 3 ರಂದು ಕೈಲ್‍ಪೊಳ್ದ್ ಹಬ್ಬ ಆಚರಿಸಲಾಯಿತು. ಕೋವಿ, ಒಡಿಕತ್ತಿ ಹಾಗೂ ಹಲವು ಆಯುಧಗಳನ್ನೆಲ್ಲ ಇಟ್ಟು ತೋಕ್‍ಪೂ, ಗಂಧದಬೊಟ್ಟನ್ನಿಟ್ಟು ಹಬ್ಬದ ಅಂಗವಾಗಿ ತಯಾರಿಸಿದಂತ ವಿಶೇಷ ಭೋಜನವನ್ನಿಟ್ಟು ಕುಟುಂಬದ ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯ ಅವರು ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪುತ್ತರಿರ ಭೂಮಿಕ ಅಚ್ಚಯ್ಯ ಹಾಗೂ ಪುತ್ತರಿರ ರಿಶಾಂಕ್ ನಂಜಪ್ಪರಿಗೆ ಪುತ್ತರಿರ ಹರೀಶ್ ಅಯ್ಯಪ್ಪ ನೀಡಿದ ಗೌರವ ಬಹುಮಾನವನ್ನು ಕುಟುಂಬದ ಹಿರಿಯರಾದ ಪುತ್ತರಿರ ಭೀಮಯ್ಯ ಹಾಗೂ ಪುತ್ತರಿರ ಟುಟ್ಟು ಕಾರ್ಯಪ್ಪ ಅವರು ನೀಡಿ ಗೌರವಿಸಿದರು.