ಆರೋಪಿ ಪರಾರಿ
ವೀರಾಜಪೇಟೆ, ಸೆ.4: ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಅರಣ್ಯ ಚೆಕ್‍ಪೋಸ್ಟ್‍ನಲ್ಲಿ ಪಿಕ್‍ಅಪ್ ಜೀಪ್‍ವೊಂದನ್ನು ತಪಾಸಣೆಗೊಳಪಡಿಸಿದಾಗ ರೂ 2ಲಕ್ಷ ಮೌಲ್ಯದ ಏಳು ಬೀಟಿ ಮರದ ನಾಟಾಗಳನ್ನು ತುಂಬಿ ಅದರ ಮೇಲೆ ಶುಂಠಿ ಚೀಲಗಳನ್ನು ಇಟ್ಟು ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ವಾಹನ ಸಮೇತ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ವಾಹನದಲ್ಲಿ ಚಾಲಕ ಮಾತ್ರ ಇದ್ದು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಚಾಲಕ ಬೀಟಿ ಮರ ತುಂಬಿದ್ದ (ಕೆ.ಎ.12 ಬಿ.1720) ಜೀಪನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಮರದ ನಾಟಾಗಳನ್ನು ಕುಶಾಲನಗರದಿಂದ ತುಂಬಿಸಿರುವುದಾಗಿ ತನಿಖೆಯಿಂದ ತಿಳಿದು ಬಂದಿದ್ದು ಅರಣ್ಯಾಧಿಕಾರಿಗಳು ಪ್ರಕರಣವನ್ನು ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಉಪವಲಯ ಅರಣ್ಯಾಧಿಕಾರಿ ಎಚ್.ಬಿ. ಉಮೇಶ್, ಫಾರಸ್ಟರ್‍ಗಳಾದ ಕೆ.ಎ.ರಮೇಶ್, ಬಿ.ಎಲ್.ರಾಘವೇಂದ್ರ ಸಿಬ್ಬಂದಿ ಇದ್ದರು.