ಕೂಡಿಗೆ, ಸೆ. 4: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ದೊಡ್ಡತ್ತೂರು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಾವಳಿಯಿಂದಾಗಿ ನಾಲ್ಕು ಎಕರೆ ಪ್ರದೇಶದ ಜೋಳದ ಬೆಳೆ ಹಾನಿಯಾಗಿದೆ.
ಚಿಕ್ಕತ್ತೂರು ಗ್ರಾಮದ ಉದಯ ಎಂಬವರಿಗೆ ಸೇರಿದ ನಾಲ್ಕು ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆಯಲಾಗಿದ್ದ ಜೋಳದ ಬೆಳೆಯನ್ನು ಸಂಪೂರ್ಣ ತುಳಿದು ಹಾನಿ ಮಾಡುವುದರ ಜೊತೆಗೆ ಸಿಹಿಗೆಣಸು ಸೇರಿದಂತೆ ಇತರೆ ಬೆಳೆಗಳನ್ನು ನಷ್ಟಪಡಿಸಿವೆ..
ಆನೆಕಾಡಿನಿಂದ ಬಂದ ಕಾಡಾನೆ ಗಳು ಬೆಂಡೆಬೆಟ್ಟ ಮಾರ್ಗವಾಗಿ ಬಂದು ಈ ವ್ಯಾಪ್ತಿಯಲ್ಲಿ ಬೆಳೆದ ಬೆಳೆಯನ್ನು ಆನೆಗಳು ನಾಶಮಾಡಿದೆ. ಭತ್ತದ ಗದ್ದೆಗಳನ್ನು ಸಹ ತುಳಿದು ಬೆಳೆ ಹಾನಿ ಮಾಡಿವೆ. ಸ್ಥಳಕ್ಕೆ ಅತ್ತೂರು ಉಪವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.