ಪಾಲಿಬೆಟ್ಟ, ಸೆ. 4: ಕೊರೊನಾ ವೈರಸ್ ಪತ್ತೆಯಾಗಿರುವ ಹೊಲಮಾಳ ಸೀಲ್‍ಡೌನ್ ವ್ಯಾಪ್ತಿಯ ಕುಟುಂಬಗಳಿಗೆ ಕೊಡಗು ಚಾರಿಟೇಬಲ್ ಗ್ರೂಪ್ ವತಿಯಿಂದ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್ ಕಿಟ್ ವಿತರಣಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಕೊಡಗು ಚಾರಿಟೇಬಲ್ ಗ್ರೂಪ್‍ನ ಪ್ರಮುಖ ಎಂ.ಎ. ಜಾಫರ್, ಅಧ್ಯಕ್ಷ ಹೆಚ್.ಎ. ಮುಸ್ತಫಾ, ಗ್ರಾಮ ಪಂಚಾಯಿತಿ ಸದಸ್ಯ ವಿಜು, ಸಮಾಜ ಸೇವಕ ಅಬ್ದುಲ್ ರೆಹಮಾನ್, ಆಶಾ ಕಾರ್ಯಕರ್ತೆ ಇಂದಿರಾ, ಮಹಿಳಾ ಆರೋಗ್ಯ ಸಹಾಯಕಿ ಪ್ರಮೀಳಾ, ಚಾರಿಟೇಬಲ್ ಗ್ರೂಪ್‍ನ ಸದಸ್ಯರುಗಳು ಇದ್ದರು.