ಕುಶಾಲನಗರ, ಸೆ. 4: ಪ್ರಕೃತಿ ಆರಾಧನೆ ನಿರಂತರವಾಗಿ ನಡೆದಲ್ಲಿ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದು ಹಿರಿಯ ಅರ್ಚಕ ಕೃಷ್ಣಮೂರ್ತಿ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಕಾವೇರಿ ಮಹಾಆರತಿ ಬಳಗದ ವತಿಯಿಂದ ಹುಣ್ಣಿಮೆ ಅಂಗವಾಗಿ 110ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರದ ಮೇಲೆ ಮಾನವನ ಚಟುವಟಿಕೆಗಳು ಅಧಿಕಗೊಂಡಂತೆ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತವೆ. ಇದರ ನಿಯಂತ್ರಣ ಆಗಬೇಕಾಗಿದೆ ಎಂದರು. ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ನದಿಗೆ ಕುಂಕುಮಾರ್ಚನೆ, ಅಷ್ಟೋತ್ತರ, ಅರ್ಚನೆ ನಡೆಸಿದ ನಂತರ ಮಹಾ ಆರತಿ ಬೆಳಗಲಾಯಿತು.

ಬಳಗದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಬಿ.ಜೆ. ಅಣ್ಣಯ್ಯ, ಲತೀಶ್ ಮತ್ತಿತರರು ಇದ್ದರು.