ಗೋಣಿಕೊಪ್ಪ ವರದಿ, ಸೆ. 4 : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಮತ್ತು ಜಿಂಕೆ ಬೇಟೆಗೆ ಸಂಬಂಧಿಸಿದಂತೆ ಕಲ್ಲಳ್ಳ ವನ್ಯಜೀವಿ ವಲಯದ ಅಧಿಕಾರಿಗಳು ಇಲ್ಲಿಯವರೆಗೆ ಐವರು ಆರೋಪಿ ಗಳನ್ನು ಮಾಲು ಸಮೇತ ವಶಪಡಿಸಿ ಕೊಂಡು ತನಿಖೆ ಮುಂದುವರಿಸಿ ದ್ದಾರೆ. ಘಟನೆ ನಡೆದು 10 ದಿನಕ್ಕೂ ಮುನ್ನವೇ ಪ್ರಕರಣ ಬೇಧಿಸಿ ತನಿಖೆ ನಡೆಸುತ್ತಿದ್ದಾರೆ.ಆರೋಪಿಗಳಾದ ಬಾಳೆಲೆ ತಟ್ಟೆಕೆರೆ ಹಾಡಿಯ ಎಂ. ಎಂ. ಸಂತೋಷ, ಸುಳುಗೋಡು ಗ್ರಾಮದ ಕಾಂಡೇರ ಶಶಿ ಆಲಿಯಾಸ್ ಶಶಿಕುಮಾರ, ಕಾಂಡೇರ ಶರಣು, ನಿಟ್ಟೂರು ಗ್ರಾಮದ ಹೊಟ್ಟೇಂಗಡ ರಂಜು ಬಿದ್ದಪ್ಪ, ಕುದನ್ನಕೋಡಿ ರಾಜಾ ಆಲಿಯಾಸ್ ಗೋಪಾಲ ಇವರುಗಳನ್ನು ವಶಕ್ಕೆ ಪಡೆದು ಮತ್ತಷ್ಟು ತನಿಖೆ ಆರಂಭಿಸಿದ್ದಾರೆ.ಇಲ್ಲಿಯವರೆಗೆ ಹುಲಿಯ 13 ಉಗುರುಗ¼ನ್ನು ವಶಕ್ಕೆ ಪಡೆಯಲಾಗಿದೆ. 2 ಕೋರೆ ಹಲ್ಲು, 1.5 ಕೆ.ಜಿ. ತೂಕದ ಜಿಂಕೆ ಮಾಂಸ, ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನ, ಡಬ್ಬಲ್‍ಬ್ಯಾರೆಲ್ ಬಂದೂಕು, ಕತ್ತಿ, ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
(ಮೊದಲ ಪುಟದಿಂದ) ಆಗಸ್ಟ್ 26 ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದ ಹುಲಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿತ್ತು. ಬೆಂಗಳೂರು, ಶನಿವಾರಸಂತೆ ವ್ಯಾಪ್ತಿಯಲ್ಲಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕಾರ್ಯಾಚರಣೆ ತಂಡದಲ್ಲಿ ನಾಗರಹೊಳೆ ಡಿಸಿಎಫ್ ಮಹೇಶ್ ಕುಮಾರ್, ಎಸಿಎಫ್ ಆಂಥೋನಿ ಪೌಲ್, ಆರ್‍ಎಫ್‍ಒ ಗಿರೀಶ್ ಪಿ. ಚೌಗುಲೆ, ಕಿರಣ್ ಕುಮಾರ್, ಸಂತೋಷ್, ಅಮೀತ್, ಡಿಆರ್ ಎಫ್‍ಒ ಯೋಗೇಶ್ ಇದ್ದರು.
-ಸುದ್ದಿಪುತ್ರ.