ಆರೋಪಿ ಸಮೇತ ಗಿಡಗಳು ವಶಕ್ಕೆ
ಕುಶಾಲನಗರ, ಸೆ 4: ಹೊಲದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಮಾಲು ಸಹಿತ ಕುಶಾಲನಗರ ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾದಪಟ್ಟಣ ಗ್ರಾಮದ ನಿವಾಸಿ ನಾಗಣ್ಣ (60) ಎಂಬಾತ ತನ್ನ ಜಮೀನಿನಲ್ಲಿ ಮರಗೆಣಸು ಗಿಡಗಳ ನಡುವೆ ಗಾಂಜಾ ಗಿಡವನ್ನು ಬೆಳೆಸಿದ್ದ. ಖಚಿತ ಮಾಹಿತಿ ಮೇರೆಗೆ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ಮತ್ತು ಠಾಣಾಧಿಕಾರಿ ಗಣೇಶ್ ನೇತೃತ್ವದ ತಂಡ ದಾಳಿ ನಡೆಸಿ 6 ಕೆ.ಜಿ. ಪ್ರಮಾಣದ ಹಸಿ ಗಾಂಜಾ ಗಿಡ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ನಗರ ಪೆÇಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.