ಸೋಮವಾರಪೇಟೆ, ಸೆ. 2: ಸಮೀಪದ ಗೌಡಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿ ಯಲ್ಲಿ ವಾರಸು ದಾರರಿಲ್ಲದ ಗೂಳಿಯೊಂದು ರೈತರ ಕೃಷಿ ಫಸಲು ನಷ್ಟ ಗೊಳಿಸುತ್ತಿದ್ದು ಇದನ್ನು ಗೋಶಾಲೆಗೆ ಸಾಗಿಸಲು ಕ್ರಮ ಕೈಗೊಳ್ಳಬೇಕೆಂದು ಗೌಡಳ್ಳಿಯ ಶ್ರೀಮಂಜುನಾಥ ಯುವಕ ಸಂಘ ಹಾಗೂ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬೀಡಾಡಿ ಗೂಳಿಯು ರೈತರ ಮನೆಯ ಜಾನುವಾರುಗಳನ್ನು ಘಾಸಿಗೊಳಿಸುತ್ತಿದ್ದು, ಕೃಷಿ ಫಸಲು ಹಾಳು ಮಾಡುತ್ತಿದೆ. ಮಹಿಳೆಯರು ಮತ್ತು ಮಕ್ಕಳು ನಡೆದಾಡಲೂ ಭಯಪಡುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ತಕ್ಷಣ ಬೀಡಾಡಿ ಗೂಳಿಯನ್ನು ಉತ್ತಮ ಗೋಶಾಲೆಗೆ ಸಾಗಿಸಲು ಕ್ರಮಕೈಗೊಳ್ಳಬೇಕೆಂದು ಕರವೇ ಶಿವರಾಮೇಗೌಡ ಬಣದ ಅಧ್ಯಕ್ಷ ಫ್ರಾನ್ಸಿಸ್ ಒತ್ತಾಯಿಸಿದ್ದಾರೆ.