ಪರಿಹಾರ ಅರ್ಜಿ ಸ್ವೀಕಾರ
ನಾಪೆÇೀಕ್ಲು, ಸೆ. 2: ತಾ. 4ನೇ ಗುರುವಾರದಿಂದ ನಾಪೆÇೀಕ್ಲು ನಾಡ ಕಚೇರಿಯಲ್ಲಿ ನಾಪೆÇೀಕ್ಲು ಹೋಬಳಿಗೆ ಸಂಬಂಧಪಟ್ಟ ರೈತರಿಂದ ಈ ಸಾಲಿನ ಬೆಳೆ ಪರಿಹಾರದ ಅರ್ಜಿಯನ್ನು ಸ್ವೀಕರಿಸಲಾಗುವದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ನಾಪೆÇೀಕ್ಲು ಬಿಜೆಪಿ ಪದಾಧಿಕಾರಿಗಳು ಮತ್ತು ರೈತ ಮೋರ್ಚಾದ ಪದಾಧಿಕಾರಿಗಳು ನಾಡ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದ ಸಂದರ್ಭ ಕಂದಾಯ ಪರಿವೀಕ್ಷಕ ಶಿವಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ರೈತರ ಅರ್ಜಿಯನ್ನು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮ ಲೆಕ್ಕಿಗರು ಖುದ್ದಾಗಿ ಅರ್ಜಿ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.