ಮಡಿಕೇರಿ, ಸೆ. 2: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಕರ್ಣಂಗೇರಿ ಗ್ರಾಮದ ಶಾಲಾ ಆವರಣದಲ್ಲಿ ಬಡ ಜನರಿಗೆ ದಿನಸಿ ಹಾಗೂ ದಿನಬಳಕೆ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಿ.ಡಬ್ಲ್ಯೂ.ಡಿ.ಯ ಲೆಕ್ಕ ಪರಿಶೋಧಕ ರಾಮಚಂದ್ರ, ತಾಲೂಕು ಸಂಚಾಲಕ ಎ.ಪಿ ದೀಪಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ನಗರ ಸಂಚಾಲಕ ಸಿದ್ದೇಶ್ ಹಾಗೂ ಸೋಮಣ್ಣ ಹಾಜರಿದ್ದರು.