ಜಿಲ್ಲೆಯಲ್ಲಿ 31 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆÀ 1489 ಪ್ರಕರಣಗಳು ವರದಿಯಾಗಿದ್ದ್ದು, 1194 ಮಂದಿ ಗುಣಮುಖರಾಗಿದ್ದಾರೆ. 21 ಮಂದಿ ಸಾವನ್ನಪ್ಪಿದ್ದು, 274 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 84 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 60 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 130 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ 245 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಡಿಕೇರಿಯ ಅರೆಕಾಡು ಹೊಸ್ಕೇರಿ ಗ್ರಾಮದ ಬಳಿಯ ಚಿಲಿಪಿಲಿ ತೋಟದ 46 ಮತ್ತು 56 ವರ್ಷದ ಮಹಿಳೆ, ತಾವೂರು ಚಂದ್ರಗಿರಿ ಎಸ್ಟೇಟಿನ 29 ವರ್ಷದ ಪುರುಷ, 24 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕ, ಮಡಿಕೇರಿ ಪ್ರಸನ್ನ ಗಣಪತಿ ದೇವಾಲಯ ಸಮೀಪದ 46 ವರ್ಷದ ಪುರುಷ, ಮಡಿಕೇರಿ ಲೋಕೋಪಯೋಗಿ ವಸತಿಗೃಹದ ಮುಳಿಯ ಬಸ್ ನಿಲ್ದಾಣದ ಮುಂದಿನ 33 ವರ್ಷದ ಪುರುಷ, ಮಡಿಕೇರಿ ಕಾವೇರಿ ಹಾಲ್ ಬಳಿಯ ಪ್ರಕೃತಿ ನಗರದ 58 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 36 ವರ್ಷದ ಪುರುಷ, ಕುಂಜಿಲದ ಮಸೀದಿ ಬಳಿಯ 49 ವರ್ಷದ ಪುರುಷ, ಕುಶಾಲನಗರದ ಎಂಜಿನಿಯರಿಂಗ್ ಹಾಸ್ಟೆಲ್ ಬಳಿಯ ಬಸವೇಶ್ವರ ಬಡಾವಣೆಯ 2ನೇ ಬ್ಲಾಕಿನ 42 ವರ್ಷದ ಮಹಿಳೆ ಮತ್ತು 45 ವರ್ಷದ ಪುರುಷ, ಮಡಿಕೇರಿ ತ್ಯಾಗರಾಜ ಕಾಲೋನಿಯ 60 ವರ್ಷದ ಪುರುಷ, 22 ವರ್ಷದ ಮಹಿಳೆ, 8 ವರ್ಷದ ಬಾಲಕ ಮತ್ತು 7 ವರ್ಷದ ಬಾಲಕಿ, ಸೋಮವಾರಪೇಟೆ ಕುಸುಬೂರು ಅಂಚೆಯ ಬೇಲೂರು ಬಾಣೆಯಲ್ಲಿನ 43 ವರ್ಷದ ಪುರುಷ ಮತ್ತು 17 ವರ್ಷದ ಬಾಲಕ, ಮಡಿಕೇರಿ ಕಣರ್ಂಗೇರಿಯ ನಿಸರ್ಗ ಬಡಾವಣೆಯ 10 ವರ್ಷದ ಬಾಲಕ, ಹೆಬ್ಬಾಲೆ ಕನಕ ಬ್ಲಾಕಿನ 13 ವರ್ಷದ ಬಾಲಕ, ಪೆÇನ್ನಂಪೇಟೆ ಪೆÇಲೀಸ್ ವಸತಿಗೃಹದ 40 ವರ್ಷದ ಪುರುಷ ಮತ್ತು 6 ವರ್ಷದ ಬಾಲಕಿ, ವೀರಾಜಪೇಟೆ ಹೆಗ್ಗಳದ ಎಡಮಕ್ಕಿ ಅಯ್ಯಪ್ಪ ದೇವಾಲಯ ಬಳಿಯ 33 ವರ್ಷದ ಮಹಿಳೆ, ಗೋಣಿಕೊಪ್ಪ 1ನೇ ಬ್ಲಾಕಿನ 57 ವರ್ಷದ ಪುರುಷ, ಪೆÇನ್ನಂಪೇಟೆ ಪೆÇಲೀಸ್ ವಸತಿಗೃಹದ 3 ವರ್ಷದ ಬಾಲಕಿ, ಕುಶಾಲನಗರ ಬಸವೇಶ್ವರ ಬಡಾವಣೆಯ 18 ವರ್ಷದ ಪುರುಷ ಮತ್ತು 16 ವರ್ಷದ ಬಾಲಕ, ಬೈಲುಕುಪ್ಪ ಬಿ.ಎಂ ರಸ್ತೆಯಲ್ಲಿನ 58 ವರ್ಷದ ಪುರುಷ, ಮೇಕೇರಿ ಗೌರಿಶಂಕರ ದೇವಾಲಯ ಬಳಿಯ 50 ವರ್ಷದ ಪುರುಷ, ಮಡಿಕೇರಿ ಬಲಮುರಿಯ ಅಂಗನವಾಡಿ ಬಳಿಯ 23 ವರ್ಷದ ಮಹಿಳೆ, ಮೂರ್ನಾಡಿನ ಗಾಂಧೀನಗರದ 29 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.