ಗೋಣಿಕೊಪ್ಪಲು, ಆ. 31: ಕಳೆದ 5 ವರ್ಷಗಳಿಂದ ಗ್ರಾಮದ ರೈತರಿಗೆ, ಕಾಫಿ ಬೆಳೆಗಾರರಿಗೆ ಬಡಜನತೆಗೆ, ಕೂಲಿ ಕಾರ್ಮಿಕರಿಗೆ,ಸ್ವಸಹಾಯ ಸಂಘಗಳ ಸದಸ್ಯರಿಗೆ ಅನುಕೂಲಕರ ವಾಗಿ ಸೇವೆ ಆರಂಭಿಸಿದ್ದ ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ ಹಳೆಯ ವಿಜಯ ಬ್ಯಾಂಕ್‍ನ್ನು ಇದೀಗ ಏಕಾಏಕಿ ಗೋಣಿಕೊಪ್ಪ ನಗರಕ್ಕೆ ಸ್ಥಳಾಂತರಿಸುವುದನ್ನು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಗ್ರಾಮದ ನೂರಾರು ರೈತರು, ಕಾಫಿ ಬೆಳೆಗಾರರು, ಸ್ವಸಹಾಯ ಸಂಘದ ಸದಸ್ಯರುಗಳು ಒಟ್ಟಾಗಿ ಬ್ಯಾಂಕಿಗೆ ತೆರಳಿ ಬ್ಯಾಂಕಿನ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಅಧಿಕಾರಿಗಳು ದಿಢೀರನೆ ನಿರ್ಧಾರಕ್ಕೆ ಬಂದ ಕಾರಣವನ್ನು ನೀಡುವಂತೆ ಒತ್ತಾಯಿಸಿದರು. ಕಾಡ್ಯಮಾಡ ಮನು ಸೋಮಯ್ಯ, ಜಮ್ಮಡ ಮೋಹನ್, ಕಾಯೇರ ಕಿರಣ್, ಜಮ್ಮಡ ಅರಸು, ಪಡಿಕಲ್ ಯದು ಇತರರು ಬ್ಯಾಂಕ್ ಸ್ಥಳಾಂತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕಿನ ವ್ಯವಸ್ಥಾಪಕರು ಹಾಸನ ಜಿಲ್ಲೆಯ ರಿಜಿನಲ್ ಮ್ಯಾನೇಜರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆಗೆ ಅವಕಾಶ ಕಲ್ಪಿಸಿದರು. ಜಿಲ್ಲಾಧ್ಯಕ್ಷ ಮನುಸೋಮಯ್ಯ ದೂರವಾಣಿಯಲ್ಲಿ ಮಾತುಕತೆ ನಡೆಸಿ ಬ್ಯಾಂಕ್ ಈ ಹಿಂದಿನಂತೆ ವಹಿವಾಟು ನಡೆಸಬೇಕು. ಯಾವುದೇ ಕಾರಣಕ್ಕೂ ಸ್ಥಳಾಂತರ ವಿಚಾರವನ್ನು ರೈತರು ಒಪ್ಪುವಂತಹದಲ್ಲ ಹತ್ತು ದಿನದ ಒಳಗೆ ತಾವುಗಳು ಆಗಮಿಸಿ ಗ್ರಾಮದ ಮುಖಂಡರೊಂದಿಗೆ ಮುಖಾಮುಖಿ ಚರ್ಚಿ ನಡೆಸಿ ನಂತರವೇ ತೀರ್ಮಾನಕ್ಕೆ ಬರಬೇಕು ಎಂದರು. ಬ್ಯಾಂಕಿನ ಹಿರಿಯ ಅಧಿಕಾರಿಗಳು ಇವರ ಮಾತಿಗೆ ಒಪ್ಪಿಗೆ ಸೂಚಿಸಿ ಗ್ರಾಮದಲ್ಲಿ ಆಗಮಿಸಿ ರೈತಮುಖಂಡರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಮನುಸೋಮಯ್ಯ ಮುಂದಾಳತ್ವದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದಲ್ಲಿ ಪ್ರ. ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಬಾಳೆಲೆ ಹೋಬಳಿಯ ಸಂಚಾಲಕ ಮೇಚಂಡ ಕಿಶ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿ ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರುಗಳು, ಸ್ತ್ರೀಶಕ್ತಿ ಸಂಘದ ಸದಸ್ಯರುಗಳು ಇನ್ನಿತರರು ಹಾಜರಿದ್ದ