ಗೋಣಿಕೊಪ್ಪಲು, ಆ.31: ಪ್ರಸ್ತುತ ವರ್ಷ ಸುರಿದ ಮಳೆ ಯಿಂದಾಗಿ ಸಾವಿರಾರು ರೈತರ ಭತ್ತದ ಗದ್ದೆಗಳು, ಕಾಫಿತೋಟಗಳು ಹಾಳಾಗಿದ್ದು ಈ ಬಗ್ಗೆ ನೊಂದ ರೈತರಿಗೆ ಸರಕಾರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ನೂರಾರು ರೈತರು ಲಿಖಿತ ಅರ್ಜಿ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಬಾಳೆಲೆ ಹೋಬಳಿಯ ರೈತರು ಒಟ್ಟಾಗಿ ಆಗಮಿಸಿ ನಲ್ಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಭೆ ನಡೆಸಿ ಜಿಲ್ಲಾಡಳಿತದ ನಿಗದಿತ ನಮೂನೆ ಯಲ್ಲಿ ಅರ್ಜಿ ಸಲ್ಲಿಸಿದರು.
ಬಾಳೆಲೆ ಹೋಬಳಿಯ ನಲ್ಲೂರು, ಬೆಕ್ಕೆಸೊಡ್ಲೂರು, ಬಾಳೆಲೆ, ಸೇರಿದಂತೆ ಇನ್ನಿತರ ಗ್ರಾಮಗಳಿಂದ ಆಗಮಿಸಿದ ರೈತರು ಕೃಷಿ ಅಧಿಕಾರಿಗಳಾದ ಮೀರಾ ಕುಮಾರಿಅವರಿಗೆ ಅರ್ಜಿಗಳನ್ನು ಹಸ್ತಾಂತರ ಮಾಡಿ ದರು. ನಂತರ ರೈತರ ಸಂವಾದ ಕಾರ್ಯಕ್ರಮವು ಅಧಿಕಾರಿಗಳು ಹಾಗೂ ರೈತರ ಸಮ್ಮುಖದಲ್ಲಿ ನಡೆದವು. ರೈತರ ಅರ್ಜಿ ಸ್ವೀಕರಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ರೈತರು ನೀಡಿದ ಅರ್ಜಿಗಳನ್ನು ಮೇಲಾಧಿಕಾರಿಗಳಿಗೆ ನೀಡುವ ಮೂಲಕ ರೈತರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಪರಿಹಾರವನ್ನು ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಕೃಷಿ ಇಲಾಖೆಯ ಮೀರಾ, ತೋಟ ಗಾರಿಕಾ ಇಲಾಖೆಯ ವಿಠಲ, ಪಂಚಾಯ್ತಿ ಪಿಡಿಒ ಸತೀಶ್, ಠಾಣಾಧಿಕಾರಿ ಉದಯ, ಅರಣ್ಯಾಧಿಕಾರಿ ಅಶೋಕ್ ಉನಗುಂದ ಸೇರಿದಂತೆ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಹಾಗೂ ಇತರರು ಹಾಜರಿದ್ದರು.