ಮಡಿಕೇರಿ, ಆ. 30: ಕೊಡಗು ಜಿಲ್ಲೆ ಸೈನಿಕ ಪರಂಪರೆಗೆ ಹೆಸರಾಗಿರುವದು ದೇಶದ ರಕ್ಷಣಾ ಪಡೆಗೆ ಸಾಕಷ್ಟು ಅಧಿಕಾರಿಗಳು, ಸೈನಿಕರನ್ನು ನೀಡಿರುವದು ದೇಶದಲ್ಲಿ ವಿಶಿಷ್ಟವಾಗಿ ಗಮನ ಸೆಳೆಯುವಂತದ್ದು. ಈ ಸೇನಾ ಪರಂಪರೆಯನ್ನು ಜಗತ್ತಿಗೆ ಸಾರುವಂತೆ ಕಂಡುಬರುವದು ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ. ಮಡಿಕೇರಿ ನಗರವನ್ನು ಮೈಸೂರು ಕಡೆಯಿಂದ ಪ್ರವೇಶಿಸುತ್ತಿದ್ದಂತೆ ಸಿಗುವದು ಫೀಲ್ಡ್ ಮಾರ್ಷಲ್ ಖ್ಯಾತಿಯ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ. ಇದನ್ನು ದಾಟಿ ಮುಂದೆ ಬಂದಾಗ ಎದುರಾಗುವದು ಮತ್ತೊಬ್ಬ ವೀರ ಸೇನಾನಿ ಪದ್ಮಭೂಷಣ ಖ್ಯಾತಿಯ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆ, ಅನತಿ ದೂರ ಮುಂದುವರಿದಾಗ ಎದುರಾಗುವದು ಮತ್ತೋರ್ವ ಹುತಾತ್ಮ ಯೋಧ ಮೇಜರ್ ದೇವಯ್ಯ ಕುರಿತು... 24.12.1932ರಲ್ಲಿ ಜನಿಸಿದ ಅಜ್ಜಮಾಡ ಬಿ. ದೇವಯ್ಯ ಭಾರತೀಯ ವಾಯುಸೇನೆಯಲ್ಲಿ ಯೋಧರಾಗಿದ್ದರು. 1965ರ ಭಾರತ - ಪಾಕಿಸ್ತಾನ ಯುದ್ಧದಲ್ಲಿ ಇವರು ತೋರಿರುವ ಭಾರೀ ಸಾಹಸ ಸೇನಾ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ. ಈ ಯುದ್ಧದಲ್ಲಿ ಹುತಾತ್ಮರಾದ ಇವರು ಪ್ರದರ್ಶಿಸಿದ ಅಪ್ರತಿಮ ಶೌರ್ಯಕ್ಕೆ ಇವರಿಗೆ ಮರಣೋತ್ತರವಾಗಿ ಭಾರತೀಯ ಸೇನೆಯ ಎರಡನೆಯ ಅತ್ಯುನ್ನತ ಶೌರ್ಯ ಪದಕವಾದ
(ಮೊದಲ ಪುಟದಿಂದ) ಮಂಗೇರಿರ ಮುತ್ತಣ್ಣ ಅವರ ಪ್ರತಿಮೆ. ಇದೀಗ ಮತ್ತೊಂದು ವೀರ ಸೇನಾನಿಯ ಐತಿಹ್ಯವಾಗಿ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲವು ವರ್ಷಗಳ ಹಿಂದೆ ಗುರುತಿಸಲ್ಪಟ್ಟು ನಿರ್ಮಾಣಗೊಂಡಿರುವ ವೃತ್ತದಲ್ಲಿ ತಲೆಎತ್ತಲಿದೆ. ‘ಮಹಾವೀರ ಚಕ್ರ’ ಸೇನಾ ಬಿರುದು ಖ್ಯಾತಿಯ ಹುತಾತ್ಮ ಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ ಪ್ರತಿಮೆ.
ಹಲವು ವರ್ಷಗಳಿಂದ ನೆನೆಗುದಿಯಲ್ಲಿದ್ದ ಯೋಜನೆ
ದೇವಯ್ಯ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಹಲವು ವರ್ಷಗಳ ಹಿಂದಿನಿಂದ ಚಿಂತನೆ ನಡೆದು ಯೋಜನೆ ಹಮ್ಮಿಕೊಳ್ಳಲಾಗಿತ್ತಾದರೂ ಈ ತನಕ ಇದು ಪೂರ್ಣಗೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬಸ್ಥರು, ಸ್ಕ್ವಾ|| ಲೀ|| ದೇವಯ್ಯ ಸ್ಮಾರಕ ಪ್ರತಿಮೆ ನಿರ್ಮಾಣ ಟ್ರಸ್ಟ್ನ ಮೂಲಕ ಸಾಕಷ್ಟು ಪ್ರಯತ್ನಗಳು ನಡೆದಿತ್ತು. ನಗರಸಭೆಯೊಂದಿಗೂ ಸಾಕಷ್ಟು ವ್ಯವಹರಿಸಲಾಗಿತ್ತು. ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಪ್ರತಿಮೆಯನ್ನು ಅಳವಡಿಸಲಾಗುತ್ತಿದೆ.
ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬ ಹಾಗೂ ಪ್ರತಿಮೆ ನಿರ್ಮಾಣ ಟ್ರಸ್ಟ್ನ ಸಂಯುಕ್ತ ಆಶ್ರಯದಲ್ಲಿ ಕಳೆದ ಹಲವು ವರ್ಷಗಳಿಂದ ದೇವಯ್ಯ ಅವರು ಹುತಾತ್ಮರಾದ ದಿನವಾದ ಸೆ. 7 ರಂದು ಈ ವೃತ್ತದಲ್ಲಿ ಅವರ ಸಂಸ್ಮರಣೆಯನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಈ ತನಕ ಇಲ್ಲಿ ಏಳು ಕಾರ್ಯಕ್ರಮಗಳು ಜರುಗಿದ್ದು, ಇದೀಗ ಎಂಟನೇ ವರ್ಷದ ಕಾರ್ಯಕ್ರಮ ಸೆ. 7 ರಂದು ನಡೆಯುತ್ತಿದೆ.
ಇದೇ ದಿನ ಉದ್ಘಾಟನೆ
ದೇವಯ್ಯ ಅವರು ಹುತಾತ್ಮರಾದ ದಿನವಾದ ಸೆ. 7 ರಂದು ಈ ವೃತ್ತದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ಆರಂಭಗೊಂಡಿದೆ. ಈ ಸ್ಥಳದಲ್ಲಿ ಹೈಮಾಸ್ಟ್ ದೀಪವನ್ನು ಪ್ರಸ್ತುತ ತೆಗೆಯಲಾಗಿದ್ದು, ಇದನ್ನು ಪಕ್ಕದಲ್ಲಿ ಅಳವಡಿಸಲಾಗುವದು. ದೇವಯ್ಯ ಹೆಸರಿನಲ್ಲಿ ನಿರ್ಮಾಣವಾಗಿದ್ದ ಸಣ್ಣದಾದ ವೃತ್ತದಲ್ಲಿ ಪಿಲ್ಲರ್ ನಿರ್ಮಿಸಲಾಗಿದ್ದು, ಇದರ ಮೇಲೆ ಸುಮಾರು 63/4 ಇಂಚು ಎತ್ತರದ ಕಂಚಿನ ಪ್ರತಿಮೆ ತಲೆ ಎತ್ತಲಿದೆ.
ಕಂಚಿನ ಪ್ರತಿಮೆಯನ್ನು ಬಿಡದಿಯ ಶಿಲ್ಪಿ ಕೆತ್ತನೆ ಮಾಡಿದ್ದು, ಸುಮಾರು ರೂ. 15 ರಿಂದ 20 ಲಕ್ಷ ರೂ.ಗಳ ವೆಚ್ಚದಲ್ಲಿ ಪ್ರತಿಮೆ ಅಳವಡಿಕೆ ಕಾರ್ಯ ಜರುಗುತ್ತಿದೆ. ಸೆ. 7 ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರುಗಳು, ಜಿಲ್ಲಾಡಳಿತದ ಪ್ರಮುಖರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಸಂಘಟನೆಗಳು, ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಫೋರಂನ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಇವರುಗಳೊಂದಿಗೆ ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ, ಪುತ್ರಿಯರಾದ ಸ್ಮಿತಾ ದೇವಯ್ಯ ಹಾಗೂ ಪ್ರೀತಾ ದೇವಯ್ಯ ಅವರುಗಳು ಪಾಲ್ಗೊಳ್ಳುತ್ತಿದ್ದಾರೆ.