ಮಡಿಕೇರಿ, ಆ.30: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಇದೀಗ ಸರ್ವೇ ಸಾಮಾನ್ಯವಾಗಿದೆ.., ಯಾವ ಪ್ರದೇಶ ನೋಡಿದರೂ ಕಾಡಾನೆ ಹಾವಳಿ.., ನಷ್ಟ.., ಧ್ವಂಸ..., ಇದೇ ಸುದ್ದಿ...!
ಆದರೆ.., ಇಲ್ಲಿ ಈ ಊರಲ್ಲಿ ಬರುವ ಆನೆ ಯಾವದೇ ನಷ್ಟ ಮಾಡದೆ ತನ್ನ ಪಾಡಿಗೆ ತಾನೇ ಅದರದ್ದೇ ಆದ ದಾರಿಯಲ್ಲಿ ನಡೆದು ಹೋಗುವ ಪರಿಪಾಠ ಬೆಳೆಸಿಕೊಂಡಿದೆ...
ಹೇಳಿದರೆ ತಮಾಷೆ ಅನಿಸಬಹುದು.., ಆದರೂ ಇದು ನಿಜ.., ಅದೆಷ್ಟೋ ವರ್ಷಗಳಿಂದ ಮಕ್ಕಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮಕ್ಕೆ ಅದೆಲ್ಲಿಂದ ಬರುತ್ತೋ ಗೊತ್ತಿಲ್ಲ ವಷರ್Àಕ್ಕೊಮ್ಮೆ ಗಜರಾಜ ಬರುತ್ತಾನೆ.., ಒಂದು ವರ್ಷ ಮುಕ್ಕೋಡ್ಲು ತಂತಿಪಾಲಕ್ಕಾಗಿ ಬಂದರೆ ಮಗದೊಂದು ವಷರ್À ಮಕ್ಕಂದೂರು ಮಾರ್ಗವಾಗಿ ಬರುತ್ತಾನೆ.., ಬಂದ ದಾರಿಯಲ್ಲಿ ಸಿಕ್ಕ ಬಾಳೆ, ಹಲಸು ತಿಂದು ಹೋಗ್ತಾನೆ.., ಯಾರಿಗೂ ತೊಂದರೆ ಮಾಡಲ್ಲ..
ಈ ಅತಿಥಿ ನಿನ್ನೆ ರಾತ್ರಿ ಅವನ ದಾರಿಯಲ್ಲೇ ಬಂದಿದಾನೆ.., ಬಾಲಾಜಿ ತೋಟದಲ್ಲಿ ತನಗೆ ಸಿಕ್ಕಿದ ಬಾಳೆ ತಿಂದು ಹಾಗೇ ರಾಜಬೀದಿಯಲ್ಲೇ ಹೋಗಿದ್ದಾನೆ...,
2018ರಲ್ಲಿ ಭೂಕುಸಿತವಾಗಿದ್ದಾಗ ಬಂದಿದ್ದ ಈ ಅತಿಥಿ ತಿನ್ನಲೇನೂ ಸಿಗದೆ ಬಾಲಾಜಿ ತೋಟದ ಬಾಳೆ ತಿಂದು ಹೋಗಿದ್ದ.., ಅದೇ ದಾರಿಯಲ್ಲಿ ನಿನ್ನೆ ರಾತ್ರಿ ಹೋಗಿದ್ದಾನೆ...
ನಡುರಾತ್ರಿಯಲ್ಲಿ ಮಡಿಕೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗ್ತಿದ್ದ ಹೆಮ್ಮೆತ್ತಾಳುವಿನ ಯುವಕ ಸುಮಂತ್ ಆನೆಯನ್ನು ಸನಿಹದಲ್ಲೇ ನೋಡಿದ್ದಾನೆ.., ಬೈಕ್ ಸೌಂಡ್ ಇದ್ರು ಆನೆ ಅದರ ಪಾಡಿಗೆ ಹಲಸಿನ ಮರದತ್ತ ಮುಖ ಮಾಡಿತ್ತು.., ಆದ್ರೆ ನಂಗೆ ಮಾತ್ರ ಉಸಿರು ನಿಂತ ಹಾಗಾಯ್ತು.., ಬೈಕ್ ತಿರುಗಿಸಿ ಮಡಿಕೇರಿಗೆ ಬಂದು ಮಲಗಿ ಬೆಳಿಗ್ಗೆ ಊರಿಗೋಗಿದ್ದಾಗಿ ಸುಮಂತ್ ಹೇಳಿದ್ರು..
ಎಲ್ಲ ಕಡೆ ಧ್ವಂಸ ಮಾಡುವ ಆನೆಗಳಿವೆ.., ಆದರೆ ನಮ್ಮೂರಿನ ಆನೆ ನಿರುಪದ್ರವಿ..., ಇಲ್ಲಿ ಆನೆ ಬಂತೆಂದು ಯಾರೂ ಪಟಾಕಿ ಹೊಡೆಯಲ್ಲ.., ಗುಂಡು ಹಾರಿಸಲ್ಲ.., ಹಾಗಾಗಿ ಆ ಗಜರಾಜ ರಾಜ ಮಾರ್ಗದಲ್ಲೆ ನಡೆಯುತ್ತ ಇದು ನನ್ನ ದಾರಿ ಅಂತ ಹೇಳ್ತಿದೆ....
ಅವನ ದಾರಿಗೆ ಅಡ್ಡಿ ಮಾಡಿ ಆಪತ್ತು ತಂದುಕೊಳ್ಳಬೇಡಿ ಎಂಬದೇ ಕೋರಿಕೆ. -ಸಂತೋಷ್