ಮಡಿಕೇರಿ, ಆ. 30: ಕೊಡಗು ಸಿರಿಗನ್ನಡ ವೇದಿಕೆಯಿಂದ “ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರು’’ ಎನ್ನುವ ವಿಷಯದ ಮೇಲೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಇಂತಿದೆ.
ಪ್ರಥಮ ಸ್ಥಾನವನ್ನು ಡಿ.ಕೆ. ಹರೀಶ್, ದ್ವಿತೀಯ ಸ್ಥಾನವನ್ನು ಬಲ್ಯಂಡ ಎಸ್. ಪ್ರತೀಕ್ಷ, ತೃತೀಯ ಸ್ಥಾನವನ್ನು ಮಳವಂಡ ಜಿ. ಚೆಂಗಪ್ಪ ಮತ್ತು ಪುಟ್ಟ ಬಸಪ್ಪ ಪಡೆದಿದ್ದಾರೆ.
ಹಾಗೆ ಸಿರಿಗನ್ನಡ ವೇದಿಕೆಯ ಉದ್ದೇಶವಾಗಿದ್ದ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರನ್ನು ವರ್ತಮಾನಿಗಳು ನೆನಪಿಸಿಕೊಳ್ಳುವ/ ಭವಿಷ್ಯಕ್ಕೂ ಜ್ಞಾಪಿಸಿಕೊಡುವ ಉದ್ದೇಶವನ್ನು ವಿಶೇಷವಾಗಿ ಭಾಗವಹಿಸಿದ ವಿದ್ಯಾರ್ಥಿ ಸಮುದಾಯದ ಬರಹಗಳು ಸಾಬೀತುಪಡಿಸಿದೆ.
ಉಳಿದ ಬರಹಗಾರರೂ ಅವರುಗಳು ಆರಿಸಿಕೊಂಡ ಸ್ವಾತಂತ್ರ್ಯ ಹೋರಾಟದ ವ್ಯಕ್ತಿಗಳ ಬಗ್ಗೆ ಬರೆದ ಬರಹಗಳು ಸಂಶೋಧನಾ ಆಸಕ್ತಿ ತೋರಿಸಿರುವುದನ್ನು ಸಾಬೀತುಪಡಿಸಿದೆ.
ತೀರ್ಪುಗಾರರಾಗಿ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನ ಸಂತೋಷ್ ನಾಯಕ್ ಆರ್. ಮತ್ತು ಬಳಗ ಕಾರ್ಯನಿರ್ವಹಿಸಿದ್ದಾಗಿ ವೇದಿಕೆ ಅಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ತಿಳಿಸಿದ್ದಾರೆ.