*ಕಡಂಗ, ಆ. 30: ಕುಂಜಿಲ ಗ್ರಾಮದ ಇಸ್ಮಾಯಿಲ್ ಅವರ ಮನೆಯ ಹಿಂಭಾಗ ಸಂಪೂರ್ಣ ನಾಶವಾಗಿದ್ದು, ಇಲ್ಲಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಭೇಟಿ ನೀಡಿ ಧನ ಸಹಾಯ ಮಾಡಿದರು.
ಈ ಸಂದರ್ಭ ಸ್ಥಳೀಯ ಮಾಜಿ ಪಂಚಾಯಿತಿ ಸದಸ್ಯ ರಜಾಕ್, ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ರಾಫಿ ವೀರಾಜಪೇಟೆ, ಶರ್ಫುದ್ದೀನ್ ಗೋಣಿಕೊಪ್ಪಲು, ಅಶ್ರಫ್, ಪವೀಲ್, ಮಾಮು ಮುಂತಾದವರು ಉಪಸ್ಥಿತರಿದ್ದರು.