ಮಡಿಕೇರಿ, ಆ. 30: ಭಾರತೀಯ ಸೇನೆಯಲ್ಲಿ ಪ್ರಸ್ತುತ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮುಕ್ಕಾಟಿರ ಸಿ. ಮುತ್ತಣ್ಣ ಅವರು ಕೂಡ ಈ ಹಿಂದೆ ಸೇನಾ ಮುಖ್ಯಸ್ಥರ ಎ.ಡಿ.ಸಿ. ಆಗಿ (ಂiಜe-ಜe-ಅಚಿmಠಿ ಣo ಅhieಜಿ ಂಡಿmಥಿ Sಣಚಿಜಿಜಿ) ಕರ್ತವ್ಯ ನಿರ್ವಹಿಸಿದ್ದಾರೆ. 2001-2003ರ ಅವಧಿಯಲ್ಲಿ ಇವರು ಮೇಜರ್ ಆಗಿದ್ದ ಸಂದರ್ಭ ಜಿಲ್ಲೆಯಿಂದ ಮತ್ತೊಬ್ಬರು ಎ.ಡಿ.ಸಿ. (ಮೊದಲ ಪುಟದಿಂದ) ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಪದ್ಮನಾಭನ್ ಅವರ ಎ.ಡಿ.ಸಿ. ಆಗಿ ಕರ್ತವ್ಯ ನಿಭಾಯಿಸಿದ್ದಾರೆ. ಅಲ್ಲದೆ ಮುತ್ತಣ್ಣ ಅವರು ಈ ಹಿಂದೆ ನಿಯೋಜನೆ ಮೇರೆಗೆ ಕರ್ನಾಟಕ ಪೊಲೀಸ್ನ ಗರುಡ ಪಡೆಯ ಮುಖ್ಯ ತರಭೇತುದಾರ (ಇನ್ಸ್ಟ್ರಕ್ಚರ್)ರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಮಾತ್ರವಲ್ಲದೆ, ಕೊಡಗಿನಲ್ಲಿ ಈ ಹಿಂದೆ ಪ್ರವಾಹ ಹಾಗೂ ಭೂಕುಸಿತದ ಸಂದರ್ಭ ಗರುಡ ಪಡೆಯೊಂದಿಗೆ ರಕ್ಷಣಾ ಕಾರ್ಯ ಹಾಗೂ ಪರಿಹಾರ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಇವರು ಜಿಲ್ಲೆಯ ಬೈರಂಬಾಡದವರಾದ ಬ್ರಿಗೇಡಿಯರ್ ಮುಕ್ಕಾಟಿರ ಅಶೋಕ್ ಕಾರ್ಯಪ್ಪ ಹಾಗೂ ಚಿತ್ರಾ ದಂಪತಿಯ ಪುತ್ರ.