*ಕೊಡ್ಲಿಪೇಟೆ, ಆ.30: ಸಮೀಪದ ಹ್ಯಾಂಡ್‍ಪೋಸ್ಟ್‍ನಲ್ಲಿರುವ ಮಸ್ಜಿದುನ್ನೂರ್ ಮಸೀದಿಗೆ ಎಸ್.ವೈ.ಎಸ್, ಎಸ್.ಎಸ್.ಎಫ್, ಕೆ.ಸಿ.ಎಫ್. ಸಂಘಟನೆಗಳ ವತಿಯಿಂದ ಸ್ನಾನದ ಟೆಂಟ್ ಅನ್ನು ಕೊಡುಗೆಯಾಗಿ ನೀಡಲಾಯಿತು.

ಶವ ಸಂಸ್ಕಾರದ ಸಂದರ್ಭದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವದಕ್ಕೆ ಅನುಕೂಲ ವಾಗಲೆಂದು ಮಯ್ಯಿತ್ ಸ್ನಾನದ ಟೆಂಟ್ ವಿತರಿಸಲಾಯಿತು.

ಈ ಸಂದರ್ಭ ಧರ್ಮಗುರು ಗಳಾದ ಖತೀಬ್ ಹಾರಿಸ್ ಬಾಖವಿ ಉಸ್ತಾದ್, ಆಡಳಿತ ಮಂಡಳಿ ಅಧ್ಯಕ್ಷ ಡಿ.ಎ. ಸುಲೈಮಾನ್, ಕಾರ್ಯದರ್ಶಿ ಹನೀಫ್, ಖಜಾಂಜಿ ಇಬ್ರಾಹಿಂ ಮಲ್ಲಳ್ಳಿ, ಸಲಹಾ ಸಮಿತಿ ಸದಸ್ಯರಾದ ಸುಲ್ಯೆಮಾನ್, ಎಸ್.ವೈ.ಎಸ್, ಎಸ್.ಎಸ್.ಎಫ್. ಕೆ.ಸಿ.ಎಫ್. ಪದಾಧಿಕಾರಿಗಳಾದ ಎಂ.ಎಂ. ಇಸ್ಮಾಯಿಲ್, ಮಹಮ್ಮದ್ ಫಾಳಿಲಿ, ಮಹಮ್ಮದ್ ಹಾಜಿ, ಶರೀಫ್ ಸಆದಿ, ಖಲಂದರ್, ರಜಾಕ್, ರಫೀಕ್, ಶಾಫಿ, ಸಲೀಂ ಸೇರಿದಂತೆ ಇತರರು ಉಪಸ್ಥಿತರಿದ್ದರು.